ಅರ್ಜುನನಿಗೆ ಶ್ರೀಕೃಷ್ಣ ಗೀತೋಪದೇಶ ಮಾಡಬೇಕಾಗಿ ಬಂದ ಮೂಲವೂ ಶಕುನಿಯ ಮತ್ಸರದ ಪ್ರೇರಣೆಯೇ.. ಬುದ್ಧಿವಂತರು ದುಷ್ಟರಾದರೆ ಬಹಳ ಕಷ್ಟ. ಇಡೀ ಮಹಾಭಾರತದಲ್ಲಿ ದುರ್ಯೋಧನನಿಗಿಂತ ಶಕುನಿ ಪಾತ್ರ ಕೆಟ್ಟತನದ್ದು. ಜಗತ್ತಿನಲ್ಲಿ ಶಕುನಿಗಳ ಸಂಖ್ಯೆ ಬಹಳಷ್ಟಿವೆ.
ರಾಜಕೀಯದಲ್ಲಿ ಶಕುನಿಗಳ ಪಾತ್ರವೇ ಅಪಾರ. ಆತ ಯುದ್ಧವಿಲ್ಲದೆ ರಾಜ್ಯವನ್ನು ಗೆದ್ದು ತಂದುಕೊಡುತ್ತೇನೆ ಎಂದು ದುರ್ಯೋಧನನಿಗೆ ದುಬೋìಧನೆ ಕೊಡುತ್ತಾನೆ. ಅದು ಕಪಟದ ಪಗಡೆಯಾಟದ ಮೂಲಕ. ಅಸೂಯೆಯನ್ನು ದಾಟಿ ಇರುವುದು ಕಷ್ಟ. ಸಜ್ಜನರನ್ನೂ ಇದು ಕಾಡುತ್ತದೆ. ಅಸೂಯೆ ಇಲ್ಲದ್ದರಿಂದಲೇ ಅರ್ಜುನ ಯುದ್ಧದಿಂದ ಹಿಂದಕ್ಕೆ ಸರಿದದ್ದು.
ಅಸೂಯೆಗೆ ಮೂಲಕಾರಣ ಅಹಂಕಾರ. ಕೇವಲ ಅಸೂಯೆ ಮಾತ್ರವಲ್ಲ, ಕಾಮ, ಕ್ರೋಧ, ಲೋಭ, ಮೋಹ, ಮದ ಎಲ್ಲವೂ ಅಹಂಕಾರದಿಂದಲೇ ಬರುವುದು. ಕೊನೆಯ ಉತ್ಪನ್ನವೇ ಮತ್ಸರ. ಅರಿಷಡ್ವೆ„ರಿಗಳಿಗೆ ಮೂಲವೇ ಅಹಂ. ಕೊನೆಯದಾದ ಮತ್ಸರವನ್ನು ಬಿಟ್ಟರೆ ಶೇ.100ರಷ್ಟು ಸಜ್ಜನ ಆಗುತ್ತಾರೆ. ಆದರೆ ಬಿಡುವುದೇ ಕಷ್ಟ. ಸೀತಾಪಹರಣದ ಮೂಲವೂ ಇಲ್ಲೇ ಇದೆ. ಶೂರ್ಪನಖಿ ಗೂ ಸೀತೆಯನ್ನು ನೋಡಿ ಅಸೂಯೆ ಮೂಡಿ ರಾವಣನಿಗೆ ಚುಚ್ಚಿಕೊಟ್ಟದ್ದರಿಂದ ಮುಂದಿನ ಬೆಳವಣಿಗೆಗೆ ಕಾರಣವಾಯಿತು. ಒಬ್ಬ ವ್ಯಕ್ತಿಯಲ್ಲಿ ಅಸೂಯೆ ಮೂಡಿತೆಂದರೆ ಮತ್ತೆ ಹಿಂದಿರುಗಿಸುವುದು ಕಷ್ಟ. ಒಮ್ಮೆ ಮೊಸರಾದರೆ ಮತ್ತೆ ಹಾಲು ಮಾಡಲಾಗದು.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811