Advertisement

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

12:55 AM Sep 17, 2024 | Team Udayavani |

ಗೀತೆ ಕೃಷಿ ಕ್ಷೇತ್ರಕ್ಕೂ ಅನ್ವಯ. ಸಹಜ/ಸಾವಯವ ಕೃಷಿಯಲ್ಲಿ ಲಾಭ ಕಡಿಮೆ. ಪರಾವಯವ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕಿದರೆ ಲಾಭ ಹೆಚ್ಚು. ಆದರೇನು? ಮುಂದೊಂದು ದಿನ ಭೂಮಿಯೇ ಬಂಜೆಯಾಗಿ ಕೃಷಿಯನ್ನೇ ಮಾಡಲಾಗದ ಸ್ಥಿತಿಗೆ ನಾವು ತಲುಪುತ್ತೇವೆ. ಸಾವಯವ ಕೃಷಿಯಲ್ಲಿ ಆದಾಯ ಕಡಿಮೆ ಬಂದರೂ ಅದು ನಿರಂತರವಾಗಿ ಕೃಷಿ ಸಾಧ್ಯವಾಗುತ್ತದೆ.

Advertisement

ಇನ್ನೊಂದು ನೀತಿ ಅಂದರೆ ಮಳೆ ಬರುತ್ತದೋ ಇಲ್ಲವೋ ಎಂದು ಆಲೋಚಿಸುತ್ತ ಕೃಷಿ ಕಾರ್ಯ ಮಾಡದಿದ್ದರೆ ಹೇಗೆ? ಆರೋಗ್ಯ ಕ್ಷೇತ್ರಕ್ಕೂ ಅನ್ವಯ. ನೋವು ನಿವಾರಕಗಳನ್ನು ಪಡೆಯುತ್ತೇವೆ. ಇದು ಮುಂದೆ ಏನೇನೋ ಭೀಕರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅಸಹಜ ದಾರಿಯಿಂದ ಅನಾಹುತವಾಗುತ್ತದೆ. ಸಹಜ ಮಾರ್ಗದಲ್ಲಿ ತುಸು ನೋವುಂಡರೂ ಮುಂದೆ ಅನುಕೂಲವಿದ್ದೇ ಇದೆ. “ಸಹಜಂ ಕರ್ಮ ಕೌಂತೇಯ ಸದೋಷಮಪಿ…’ ಸದೋಷಮಪಿ ಅಂದರೆ ನೋವು ಎಂದು ಅನ್ವಯಿಸಬಹುದು. ಗೀತೆಯು ಮೋಕ್ಷವನ್ನು ಮಾತ್ರ ಹೇಳುವುದಲ್ಲ. ಆಟವಾಡುವವರಿಗೂ ಗೀತೆ ಸಂದೇಶವಿದೆ.

ಇತ್ತೀಚಿಗೆ ಒಲಂಪಿಕ್ಸ್‌ ಶೂಟರ್‌ ಮನು ಭಾಕರ್‌ ಗೀತೆಯ ಸಂದೇಶವಾದ ಫ‌ಲದ ನಿರೀಕ್ಷೆ ಮಾಡಬೇಡ ಎಂಬುದು ತನ್ನ ಸಾಧನೆಗೆ ಸ್ಫೂರ್ತಿ ಎಂದು ಹೇಳಿದರು. ಫ‌ಲದ ಬಗ್ಗೆ ಯೋಚಿಸುತ್ತ ಕುಳಿತರೆ ಕೆಲಸದ ಬಗ್ಗೆ ಅಷ್ಟು ತೀವ್ರತೆ ಕಡಿಮೆಯಾಗುತ್ತದೆ. ಫ‌ಲ ಬಾರದೆ ಇದ್ದರೆ ಅದರಿಂದ ಬೇಸರವೂ ಆಗುತ್ತದೆ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next