Advertisement

Udupi ಗೀತಾರ್ಥ ಚಿಂತನೆ- 22: ದುಷ್ಟರಿಗೆ ಬೆಂಬಲ ಕೊಡುವುದೂ ಅಧರ್ಮ

12:53 AM Aug 31, 2024 | Team Udayavani |

“ಸ್ವ ವಿಹಿತ ವೃತ್ತಿ’ ಅಂದರೆ ನಾವೇ ಆರಿಸಿಕೊಂಡ ವೃತ್ತಿ ಎಂಬರ್ಥವಿದೆ. ನಾವೇ ಆಯ್ಕೆ ಮಾಡಿದ ಬಳಿಕ ಮತ್ತದನ್ನು ಬದಲಾಯಿಸದೆ ಶ್ರದ್ಧೆಯಿಂದ ದೇವರ ಪೂಜೆಯಾಗಿ ಮಾಡಬೇಕು. ಈಗಿನ ಕಾಲದಲ್ಲಿ ವಿವಾಹ ಜೀವನಕ್ಕೆ ಇದನ್ನು ಅರ್ಥ ಮಾಡಬಹುದು. ಅವರವರೇ ಒಪ್ಪಿ ಸ್ವೀಕರಿಸಿದಂತಹ ಗೃಹಸ್ಥ ಜೀವನವನ್ನು ವಿಚ್ಛೇದನ ಮೂಲಕ ಮಧ್ಯದಲ್ಲಿ ತುಂಡರಿಸುವುದು ಸಮಂಜಸವಲ್ಲ. ಸ್ವೀಕರಿಸುವ ಮೊದಲೇ ಸಾಕಷ್ಟು ಸಮಯವಿರುತ್ತದೆ, ಯೋಚಿಸಬಹುದಲ್ಲ? ನಮ್ಮ ಧರ್ಮಾಚರಣೆ ದೀರ್ಘ‌ ಕಾಲ ಇರಬೇಕೆಂಬ ನಿಯಮವಿದೆ. ಇದು ಎಷ್ಟು ದೀರ್ಘ‌ಕಾಲವೆಂದರೆ ಮೋಕ್ಷದವರೆಗೆೆ. ಮಾಡಬಾರದ ವೃತ್ತಿಯನ್ನು ನಡೆಸುವುದನ್ನು “ಸ್ವಅವಿಹಿತ ವೃತ್ಯಾ ಅಭಕ್ತ್ಯಾ ಭಗವದಾರಾಧನಮೇವ ಪರಮೋ ಅಧರ್ಮಃ’ ಎಂದು ಲೇವಡಿ ಮಾಡಬಹುದು.

Advertisement

ಸಮುಚಿತವಲ್ಲದ ವೃತ್ತಿಯನ್ನು ಭಗವದಾರಾಧನೆ ದೃಷ್ಟಿಯಿಂದ ಮಾಡಿದರೂ ತಪ್ಪೇ. ಅಧರ್ಮದ ಜತೆ ಇರುವುದೂ ತಪ್ಪು, ಆದ ಕಾರಣ ಕೇವಲ ದುಷ್ಟರಿಗೆ ಬೆಂಬಲ ಕೊಟ್ಟಿದ್ದಾರೆಂಬ ಕಾರಣಕ್ಕಾಗಿಯೇ ಮಹಾಭಾರತ ಯುದ್ಧದಲ್ಲಿ ಎಲ್ಲ ದುಷ್ಟರನ್ನೂ ಕಲೆ ಹಾಕಿ ಸಂಹರಿಸಬೇಕಾಯಿತು. ಈ ದೃಷ್ಟಿಯಲ್ಲಿ “ಆಪದ್ಧರ್ಮ’ ಬಲುಸೂಕ್ಷ್ಮ. ವೃತ್ತಿ ಶಬ್ದದ ಸರಳ ಅರ್ಥ ಕೃತ್ಯ. ವೃತ್ತಿಯಿಂದ ಬರುವ ಫ‌ಲವನ್ನು ಭಗವದರ್ಪಣೆ ಮಾಡಿದರೆ ಸೈ. ಇದನ್ನೇ ಕರ್ಮಫ‌ಲತ್ಯಾಗ ಮಾಡಬೇಕೆಂದು ಕೃಷ್ಣ ಹೇಳಿದ್ದು. ಇದನ್ನೇ ಭಗವದಾರಾಧನೆ ಎಂದು ತಿಳಿಯಬೇಕು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next