Advertisement

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

12:46 AM Sep 14, 2024 | Team Udayavani |

ತನ್ನ ಪಾಲಿಗೆ ಬಂದ ಕೆಲಸವನ್ನು (ಸ್ವಧರ್ಮ) ಮಾಡಿದರೆ ಆರ್ಥಿಕ ಲಾಭ ಕಡಿಮೆ. ಸ್ವಕರ್ಮದ ಪಾಲನೆಯಿಂದ ಸಿದ್ಧಿಯೂ ಅನುಭವಕ್ಕೆ ಬರುತ್ತದೆ. “ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ’ ಎಂದು ಶ್ರೀಮದಾಚಾರ್ಯರು ಗೀತಾ ಭಾಷ್ಯದಲ್ಲಿ ಹೇಳಿದ್ದಾರೆ. ಶಾಸ್ತ್ರೋಕ್ತ ಸ್ವಧರ್ಮವೇ ಜಗತ್ತಿನ ವ್ಯವಸ್ಥೆಯನ್ನು ರೂಪಿಸುತ್ತದೆ. ತಮ್ಮ ಜವಾಬ್ದಾರಿಯನ್ನು ಮೊದಲು ಮಾಡಬೇಕೆಂಬ ನಿಯಮವೇ ಸ್ವಧರ್ಮ. ತಮ್ಮ ಶಾಖೆಯ ವೇದ ಓದಿದ ಬಳಿಕ ಇತರ ವೇದ ಓದಬಹುದು.

Advertisement

ನಮಗಾದ ಒಂದು ಅನುಭವ ಹೀಗಿದೆ: ಗುರುಕುಲ ವಿದ್ಯಾಭ್ಯಾಸ ಮುಗಿದ ತತ್‌ಕ್ಷಣ ಆಧುನಿಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕೆಂದು ಭಾರೀ ಉತ್ಸಾಹವಿತ್ತು. ಆಗ ನಮ್ಮ ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥರು ಕಣ್ಣು ತೆರೆಸಿದರು. “ನಿಮ್ಮಿಂದ ಮಧ್ವಾಚಾರ್ಯರು, ವಾದಿರಾಜರು ಏನನ್ನು ನಿರೀಕ್ಷಿಸುತ್ತಾರೆ? ಲೌಕಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸಿದರೆ ಅವರಿಗೆ ಸಂತೋಷವಾಗಬಹುದು ಎಂದು ಅನಿಸುತ್ತದೆಯೆ? ಭಗವಂತ ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದ ಉದ್ದೇಶವೇನು?’ ಎಂದು ಗುರುಗಳು ಪ್ರಶ್ನಿಸಿದರು. ಆಗ ಅರ್ಥವಾಯಿತು. ಖರ್ಚಿನ ಬಾಬ್ತೇ ಆಗಿರುವ, ಲಾಭವೇ ಇರದ ಧಾರ್ಮಿಕ ಶಿಕ್ಷಣದ ವಿದ್ಯಾಪೀಠ ನಡೆಸುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ಮಾಡಬಹುದು ಎಂದು ಆಗಲೇ ನಿರ್ಧರಿಸಿ ಮುಂದುವರಿದೆವು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.