ಉಪಕಾರ ಮಾಡಿದವರಿಗೆ (ಕೃತೆ ಚ ಪ್ರತಿಕರ್ತವ್ಯಂ ಏಷ ಧರ್ಮ ಸನಾತನಃ:) ಪ್ರತ್ಯುಪಕಾರ ಮಾಡಬೇಕು. ಇದುವೇ ಧರ್ಮ. ತಾನವರಿಗೆ ಉಪಕಾರ ಮಾಡಿದ್ದೇನೆ, ನಮಗೂ ಅವರು ಮಾಡಬೇಕು. ಪಾಂಡವರಿಗಂತೂ ಧರ್ಮ ಬುದ್ಧಿ ಇದೆ ಎಂಬುದು ಧೃತರಾಷ್ಟ್ರನ ಚಿಂತನೆ. ಹಿಂದೆ ಪಾಂಡವರನ್ನು ಅರಮನೆಗೆ ಕರೆಸಿ ಸಾಕಿದ್ದನಲ್ಲವೆ? ಅನಂತರ ಪಾಲನ್ನೂ ಕೊಟ್ಟನಲ್ಲವೆ? ಹಿಂದೆ ದ್ರೌಪದಿ ವಸ್ತ್ರಾಪಹರಣ ಪ್ರಕರಣವಾದಾಗಲೂ ಕೌರವರನ್ನು ಪಾಂಡವರು ಮುಗಿಸಿಯೇಬಿಡುತ್ತಿದ್ದರು. ಆದರೂ ಸಹಿಸಿಕೊಂಡರಲ್ಲವೆ? ಹೀಗಾಗಿ ಪ್ರತ್ಯುಪಕಾರ ಬುದ್ಧಿಯಿಂದ ನಮಗೇ ಭೂಮಿಯನ್ನು ಬಿಟ್ಟುಕೊಟ್ಟರೆ ಅನುಕೂಲವಾಯಿತಲ್ಲವೆ? ಇದು ಧೃತರಾಷ್ಟ್ರನ ನಿರೀಕ್ಷೆಗಳು. “ಧರ್ಮಕ್ಷೇತ್ರೇ’ ಎಂಬ ಗೀತೆಯ ಮೊದಲ ಶಬ್ದವೇ ಇಡೀ ಭಗವದ್ಗೀತೆಯನ್ನು ಕಟ್ಟಿನಿಲ್ಲಿಸುತ್ತದೆ. ಧೃತರಾಷ್ಟ್ರ ಸ್ವಭಾವತಃ ಉತ್ತಮ, ಪ್ರಭಾವತಃ ಕೆಟ್ಟವನಾದ.
ಹೀಗಿರುವುದರಿಂದಲೇ ಆಗಾಗ ಪಾಂಡವರಿಗೆ ಒಂದಿಷ್ಟು ಒಳಿತನ್ನೇ ಮಾಡಿದ್ದು. ದುರ್ಯೋಧನ ಸ್ವಭಾವತಃ ಕೆಟ್ಟವ. ಅರ್ಜುನ ಸ್ವಭಾವತಃ ಉತ್ತಮನಾಗಿದ್ದು, ಪ್ರಭಾವದಿಂದ ಸಂಶಯಗ್ರಸ್ತನಾದ. ಇಲ್ಲಿ ಈ ಮೂವರ ಮಾನಸಿಕತೆ ತೋರುತ್ತದೆ. ಇವರ ಮಾನಸಿಕ ಸ್ಥಿತಿ ಮೊದಲ ಅಧ್ಯಾಯದಲ್ಲಿರುವುದರಿಂದ ವ್ಯಾಖ್ಯಾನಕಾರರು ಭಗವಂತ ಇವುಗಳಿಗೆ ಯಾವ ಪರಿಹಾರ ಕೊಟ್ಟನು ಎನ್ನುವುದನ್ನೇ ವಿಶ್ಲೇಷಿಸಿದರು.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811