Advertisement

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

02:05 AM Sep 30, 2024 | Team Udayavani |

ಪಾಂಡವರು ಹುಟ್ಟಿದ್ದು ಕಾಡಿನಲ್ಲಿ. ಕೌರವರು ಹುಟ್ಟಿದ್ದು ಅರಮನೆಯಲ್ಲಿ. ಇದು ಕೌರವನ ಕಡೆಯವರ ವಾದ. ಈಗಿನ ಸಿಟಿಸನ್‌ಶಿಪ್‌ ವಾದದಂತೆ. ನಿಮಗೇಕೆ ಸಾಮ್ರಾಜ್ಯ? “ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌’ ಎಂಬ ಉಪನಿಷತ್ತಿನ ವಾಕ್ಯದಂತೆ ರಾಷ್ಟ್ರವನ್ನು ಆಳುತ್ತಿದ್ದವ ಬದುಕಬೇಕಿತ್ತು. ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮತ ಹಾಕಿದವರೂ, ಹಾಕದಿದ್ದವರೂ ಸಮಾನರೇ ಅಲ್ಲವೆ? ವೇದಾಂತವನ್ನೂ ವ್ಯವಹಾರವನ್ನೂ ಮಿಶ್ರಣ ಮಾಡುವುದು ಸರಿಯಲ್ಲ.

Advertisement

ಏಕೆಂದರೆ ತಪ್ಪು ಮಾಡಿದಾಗ ಬಚಾವಾಗಲು ವೇದಾಂತವನ್ನು ಬಳಸಿಕೊಳ್ಳುವ ಅಪಾಯವಿದೆ. ಧೃತರಾಷ್ಟ್ರನದೂ ಹಾಗೆಯೇ ಆಗಿದೆ. ಜವಾಬ್ದಾರಿ ತಪ್ಪಿಸಿಕೊಳ್ಳುವುದು ಆತನ ಉದ್ದೇಶ. ಜೂಜು ಆಡುವಾಗ ಯಾರು ಗೆದ್ದರು ಎಂದು ಧೃತರಾಷ್ಟ್ರ ಸ್ವಾರ್ಥದಿಂದ ಕೇಳಿರಲಿಲ್ಲವೆ? ಆ ಕಾಲದ ಶಾಸನದ ಪ್ರಕಾರ ರಾಜನ ಮಾತೇ ಅಂತಿಮ ಆಗಿತ್ತು. ಧೃತರಾಷ್ಟ್ರ ಹೇಗಿದ್ದರೂ ರಾಜ. ತನ್ನ ಮಾತೇ ಕೊನೆಯದಾಗಿ ನಡೆಯಬಹುದು ಎಂಬ ತಿಳಿವಳಿಕೆಯೂ ಇತ್ತು. ಪಾಂಡವರು ಹೇಗಿದ್ದರೂ ಚಿಕ್ಕವರು, ಧಾರ್ಮಿಕರು. ಪಾಂಡವರಿಗೆ ಸಾಮ್ರಾಜ್ಯ ಕೊಡುವುದಿಲ್ಲ ಎಂದ ಧೃತರಾಷ್ಟ್ರ ಈ ಹಿಂದೆ ಇಂದ್ರಪ್ರಸ್ಥದಲ್ಲಿ ರಾಜ್ಯವನ್ನು ನೀಡಿರಲಿಲ್ಲವೆ? “ಮಾಮಕಾಃ’ ಎಂಬ ಶಬ್ದವನ್ನು ಎಚ್ಚರದಿಂದ ಬಳಸಲಾಗಿದೆ. ದಾನ ಮಾಡುವಾಗ “ಇದಂ ನ ಮಮ’ ಎನ್ನುವುದಿದೆ.

ಮಮಕಾರವನ್ನು ಬಿಡುವುದು ಬಹಳ ಕಷ್ಟ. ಧೃತರಾಷ್ಟ್ರನನ್ನು ಬಂಧಿಸಿದ್ದೂ ಮಮಕಾರ.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next