Advertisement
“ನನ್ನ’ ಎಂಬುದನ್ನು ಬಿಟ್ಟರೆ ಬಹುಮಾನ ಬಂದರೂ ಖುಷಿಯಾಗುವುದಿಲ್ಲ. ಈ ಅಭಿಮಾನ ಮನಸ್ಸಿನಲ್ಲಿರುತ್ತದೆ. ದೇಹದಲ್ಲಿರುವುದನ್ನು ಆತ್ಮನು ತನ್ನದೆಂದು ತಿಳದುಕೊಂಡದ್ದರಿಂದ ಆತನಿಗೆ ಸುಖದುಃಖಗಳು ಬಂತು. ಯಾವುದೇ ಜಡವಸ್ತುವಿನಲ್ಲಿ ಭಾವನೆ, ಅಭಿಮಾನವಿಲ್ಲ. ನಮ್ಮ ಮನಸ್ಸಿನಲ್ಲಿ ಇದೆ. ನಮ್ಮ ಮನೆ, ನಮ್ಮ ಮಕ್ಕಳು, ನನ್ನ ದೇಹ ಎನ್ನುವುದರಿಂದ ದುಃಖವಾಗುತ್ತದೆ. “ನನ್ನದು’ ಎಂಬ ಭಾವ ಕಡಿಮೆಯಾಗುತ್ತದೋ ಆಗ ದುಃಖವೂ ಕಡಿಮೆಯಾಗುತ್ತದೆ. ಮನಸ್ಸಿಗೆ ಬೇಸರವಾದಾಗ ದೇಹಕ್ಕೆ ಹೆಚ್ಚು ಅಲಂಕಾರ ಮಾಡಿಕೊಳ್ಳುವುದಿಲ್ಲ. “ಒಂದು ದಿನ ನಮಗೂ ಹೀಗೆಯೇ’ ಎಂದು ಸುಮ್ಮನಿರುತ್ತೇವೆ. ಮತ್ತೆ “ನನ್ನ ದೇಹ ಹಾಗಿರಬೇಕು, ಹೀಗಿರಬೇಕು’ ಎಂದುಕೊಳ್ಳುತ್ತೇವೆ. ಅಂದರೆ ಅಭಿಮಾನ ಜಾಸ್ತಿಯಾದಷ್ಟು ಒತ್ತು ಕೊಡುತ್ತೇವೆ, ಕಡಿಮೆಯಾದಷ್ಟು ಉಪೇಕ್ಷೆ ಮಾಡುತ್ತೇವೆ. ಒಟ್ಟಾರೆ ಅಭಿಮಾನವೇ ಸುಖದುಃಖಗಳಿಗೆ ಮೂಲ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
Related Articles
Advertisement