ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ| (ಗೀತೆ 2-12 )
Advertisement
ಬಾಲ್ಯ ಸ್ಥಿತ್ಯಂತರವಲ್ಲವಾದ ಕಾರಣ ಕೌಮಾರ್ಯ, ಯೌವ್ವನ ಸ್ಥಿತ್ಯಂತರದ ಸ್ಥಿತಿ ಎಂದು ಕೃಷ್ಣ ಹೇಳುತ್ತಾನೆ. ಕೃಷ್ಣ ಬಾಲ್ಯವನ್ನು ಏಕೆ ಬಿಟ್ಟ ಎಂದರೆ ಬಾಲ್ಯ ಹುಟ್ಟುವಾಗಲೇ ಬಂದದ್ದು, ಆದ್ದರಿಂದ ಅದು ಸ್ಥಿತ್ಯಂತರವಲ್ಲ. ಬದಲಾವಣೆಯನ್ನಷ್ಟೇ ಕೃಷ್ಣ ಹೇಳಿದ್ದು. ಯೌವ್ವನ ಮುಖ್ಯವಾದರೂ ಕೌಮಾರ್ಯವನ್ನು ಏಕೆ ಹೇಳಿದನೆಂದರೆ ಅದು ಕೇವಲ ಸುಖಸ್ಥಿತಿ. ಕೌಮಾರ್ಯದಲ್ಲಿ ಯಾವುದೇ ಜವಾಬ್ದಾರಿಗಳಿರುವುದಿಲ್ಲ, ಯೌವ್ವನದಲ್ಲಿ ಸ್ವಲ್ಪ ಜವಾಬ್ದಾರಿಯೂ ಇರುತ್ತದೆ. ಇವೆರಡು ಬದಲಾವಣೆಯಾಗುವ ದುಃಖದ ಪ್ರಸಂಗದಲ್ಲಿಯೂ ದುಃಖಿಸದವ, ಈಗೇಕೆ ದುಃಖೀಸಿದಿ ಎಂಬುದು ಕೃಷ್ಣ ಪ್ರಶ್ನೆ. ವಾರ್ಧಕ್ಯವೆಂದು ಹೇಳದೆ “ಜರಾ’ ಎನ್ನುವುದಕ್ಕೆ ಕಾರಣ ಇದರಲ್ಲಿ ತುಸು ವ್ಯತ್ಯಾಸವಿದೆ. ಜರಾ ಅಂದರೆ ಅಂಗಾಂಗಗಳು ಸರಿಯಾಗಿ ಕೆಲಸ ಮಾಡದ ಸ್ಥಿತಿ. ಜರಾ= ಜೀರ್ಣವಾದದ್ದು. ವಾರ್ಧಕ್ಯ=ವೃದ್ಧಿಯ ಪರಾಕಾಷ್ಠೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ
Related Articles
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
Advertisement