Advertisement

Udupi: ಗೀತಾರ್ಥ ಚಿಂತನೆ-114: ಯಾರ ಅಸ್ತಿತ್ವಕ್ಕೂ ನಾಶವಿಲ್ಲ

01:55 AM Dec 05, 2024 | Team Udayavani |

ದೇವರು ಕೂಡ ಯಾರ ಅಸ್ತಿತ್ವವನ್ನೂ ನಾಶ ಮಾಡುವುದಿಲ್ಲ ಎಂದು ಸ್ವತಃ (ಕೃಷ್ಣನೇ) ದೇವರೇ ಸ್ಪಷ್ಟಪಡಿಸುತ್ತಾನೆ. ಕಮಲವನ್ನು ಅರಳಿಸುವಂತೆ ಅರಳಿಸುವುದು ಮಾತ್ರ ದೇವರ ಕೆಲಸ. ಆತ ನಾಶ ಅಥವಾ ಸೃಷ್ಟಿ ಮಾಡುವುದೇ ಇಲ್ಲ. ನಾನೂ, ನೀನೂ, ಉಳಿದವರೂ ಇರುತ್ತಾರೆಂದು ಮೂರು ಬಗೆಯಲ್ಲಿ ಹೇಳಿದ್ದಾನೆ.

Advertisement

ನಾವು ಇರುವ ತನಕ ಇದ್ದರೆ ಸಾಕು ಎಂಬ ಭಾವವಿರುತ್ತದೆ. ನಮ್ಮಂತೆ ಮೊಮ್ಮಕ್ಕಳೂ ಇರಬೇಕು ಎಂಬ ಭಾವ ಇರಬೇಕು. ದೈತ್ಯರ ಸ್ವಭಾವ ನಾನಿಲ್ಲದಿದ್ದರೆ ಜಗತ್ತೂ ಇರಬಾರದು ಎಂದು. ಶ್ರೀಕೃಷ್ಣ “ಜನಾಧಿಪಾಃ’ ಎಂದು ಹೇಳಿದ್ದೇಕೆ? ಶ್ರೀಮಂತರೆಲ್ಲರೂ ಇರುತ್ತಾರೆ, ಬಡವರು ಮಾತ್ರ ಸಾಯುವುದು ಎಂಬ ಮಾತನ್ನು ನಾವು ಆಡುವುದಿದೆ. ಆದ್ದರಿಂದ “ಜನಾಧಿಪಾಃ’ ಕೂಡ ಇರುತ್ತಾರೆ ಎಂದ ಕೃಷ್ಣ. ದೇವರ ನ್ಯಾಯದೆದುರು ಚಕ್ರವರ್ತಿಗಳೂ ಒಂದೇ ಜನರೂ ಒಂದೇ, ವ್ಯತ್ಯಾಸವಿಲ್ಲ. ಯಾರೂ ನಾಶ ಆಗರು. ಬದಲಾವಣೆ ಆಗುತ್ತದೆ ಅಷ್ಟೆ ಎಂಬ ಸಂದೇಶ ಕೊಡುತ್ತಾನೆ.

“ಯಾರಾದರೂ ಸತ್ತಾಗ ದೇವರು ನನ್ನನ್ನಾದರೂ ಕರೆದೊಯ್ಯಬಹುದಿತ್ತು’ ಎನ್ನುವುದಿದೆ. “ನಾನು ಹೋಗುವವನಲ್ಲ’ ಎಂಬ ಭಾವನೆ ಇರುವುದು ಇದಕ್ಕೆ ಕಾರಣ. ರೈಲಿನಲ್ಲಿ ಅವರವರ ಸ್ಟೇಶನ್‌ ಬಂದಾಗ ಇಳಿಯುವುದು ಸಹಜ. ಎಲ್ಲರಿಗೂ ಇಷ್ಟೇ. “ತಾನು ಬೇರೆ, ಇತರರು ಬೇರೆ’ ಎಂದು ಮನುಷ್ಯರು ಭಾವಿಸುತ್ತಾರೆ. ಅಪಘಾತವಾದಾಗ ಯಾವ ತಾರತಮ್ಯವೂ ಇಲ್ಲದೆ ಎಲ್ಲರೂ ಹೋಗುವವರೇ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next