“ನನ್ನ ಮೇಲೆ ಮಾಯೆ ಮಾಡುವುದಿಲ್ಲ’ ಎಂದು ತಿಳಿದುಕೊಳ್ಳುವುದೇ ದೊಡ್ಡ ಮಾಯೆ. ನಮಗೆ ಗೊತ್ತಿಲ್ಲದೆ ಮಾಯೆ/ಅಜ್ಞಾನ ನಮ್ಮನ್ನು ಆವರಿಸಿಕೊಂಡುಬಿಟ್ಟಿರುತ್ತದೆ. “ಯಾವ ಸಮಯದಲ್ಲಿ ಏನೂ ಆಗಬಹುದು. ಸಿದ್ಧರಾಗಿದ್ದೇವೆ’ ಎಂಬ ಜಾಗೃತಿ ಇದ್ದರೆ ನೆಮ್ಮದಿ ಇರುತ್ತದೆ.
ಮರಣದ ಸ್ಮರಣೆಯಿಂದ ಉತ್ಸಾಹ ಜಾಸ್ತಿಯಾಗುವ ಸಂಭವವೂ ಇರುತ್ತದೆ. ಒಂದೆಡೆ ಸ್ಟೆಮಿನಾ (ಶಕ್ತಿ) ಬೇಕು, ಇನ್ನೊಂದೆಡೆ ಒತ್ತಡವೂ (ಟೆನÒನ್) ಬೇಕು. ಶಕ್ತಿ ಇಲ್ಲದೆ ಟೆನ್ಷನ್ ಇದ್ದರೆ ಲಗಾಡಿಯಾಗುತ್ತದೆ. ತಡೆದುಕೊಳ್ಳುವ ಶಕ್ತಿ ಮತ್ತು ಒತ್ತಡ ಇದ್ದಾಗ ಉತ್ತಮ ಫಲಿತಾಂಶ ಬರುತ್ತದೆ. ಟೆನ್ಷನ್‌ನಿಂದ ಆ್ಯಕ್ಟಿವ್ ಆಗಿರುವುದು ಸಾಧ್ಯ. ರಾಜಕಾರಣಿಗಳು ಸದಾ ಆ್ಯಕ್ಟಿವ್ ಆಗಿರುವುದರಿಂದಲೇ ಅಷ್ಟೊಂದು ಟೆನ್ಷನ್ ಸಹಿಸಿಕೊಳ್ಳುತ್ತಾರೆ.
ಕೆಲವು ವಿಶೇಷ ಚೇತನರು ಕ್ರಿಯಾಶೀಲರಾಗಿರುವುದನ್ನು ನೋಡಬಹುದು. ಒಳಗಿನ ಸ್ಫೂರ್ತಿಯು ತೊಂದರೆಯನ್ನು ಇದಿರಿಸುವ ಶಕ್ತಿಯನ್ನು ಕೊಡುತ್ತದೆ. ಕೌರವರಿಗೂ ಇದೇ ತೆರದಿ ದುಃಖವಿದ್ದರೆ ಅದಕ್ಕಾದರೂ ಅರ್ಥವಿರುತ್ತದೆ. ಒನ್‌ವೇ ಪ್ರೀತಿಯಂತೆ ಒನ್‌ವೇ ದುಃಖವೂ ವ್ಯರ್ಥವೇ. ಗುರುಗಳನ್ನು ಶಿಷ್ಯರು ಕೊಲ್ಲುತ್ತಾರೆಂಬುದಕ್ಕಿಂತ ಶಿಷ್ಯರನ್ನೇ ಗುರುಗಳು ಕೊಲ್ಲುತ್ತಿದ್ದಾರೆನ್ನುವುದು ಹೆಚ್ಚು ಆಘಾತಕಾರಿ. ಹಾಗೆ ನಿನ್ನ ಗುರುಹಿರಿಯರಿಗೇನಾದರೂ ಅನಿಸಿದೆಯೆ? ಆದ್ದರಿಂದ ನಿನ್ನ ದುಃಖಕ್ಕೆ ಯಾವುದೇ ಅರ್ಥವಿಲ್ಲ ಎನ್ನುತ್ತಾನೆ ಶ್ರೀಕೃಷ್ಣ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811