ಅಪರೋಕ್ಷಜ್ಞಾನದ ಬಳಿಕವೇ ಮೋಕ್ಷ ಖಚಿತವಾಗುವುದು. ಇದು ದೊರೆಯುವುದು ಭಕ್ತಿ ಮೂಲದಿಂದಲೇ. ಅಪರೋಕ್ಷಜ್ಞಾನಕ್ಕಿಂತ ಮೊದಲು “ದೇವರು ಇದ್ದಾನೋ? ಇಲ್ಲವೋ?’ ಎಂಬ ಸಂಶಯ ಬರುತ್ತದೆ. ಅನಂತರ ಸಂಶಯದ ಪ್ರಶ್ನೆ ಇರುವುದಿಲ್ಲ. ಆದರೆ ಅಭ್ಯಾಸಬಲದಿಂದ ಸಾಧಕ ಭಕ್ತಿಯನ್ನು ಹೊಂದಿರುತ್ತಾನೆ.
ಅಪರೋಕ್ಷಜ್ಞಾನದಬಳಿಕವೂ ಭಕ್ತಿ ಇರುವುದರಿಂದಲೇ ಮೋಕ್ಷ ಪ್ರಾಪ್ತಿಯಾಗುವುದು. ಪಾಂಡವಾದಿಗಳು ಮೋಕ್ಷದ ಎಲ್ಲ ಅರ್ಹತೆ ಹೊಂದಿದ್ದರೂ ಶ್ರವಣಾದಿ ಕರ್ಮಗಳನ್ನು ನಡೆಸಿದ್ದರು. ಮೋಕ್ಷ ಹೊಂದುವವರಲ್ಲಿ ಮೂರು ಬಗೆ. ಮನುಷ್ಯರು ಕನಿಷ್ಠ ದರ್ಜೆಯವರು, ಇವರಿಗಿಂತ ಋಷಿಗಳು, ಅನಂತರ ದೇವತೆಗಳು ಶ್ರೇಷ್ಠರು. ಋಷಿ ಸ್ಥಾನವು ಸಾಧನರೂಪವಾಗಿದ್ದರೆ, ದೇವತೆಗಳು ಮತ್ತು ಮನುಷ್ಯರದ್ದು ಜೀವಸ್ವಭಾವವಾಗಿದೆ. ಏಕೆಂದರೆ ಋಷಿ ಸ್ಥಾನವು ತಪಸ್ಸು ಮಾಡಿ ಬಂದಿರುವುದು.
ಮನುಷ್ಯೋತ್ತಮರೇ ಋಷಿಗಳು. ಇವರಲ್ಲಿ ಬ್ರಹ್ಮಋಷಿ, ದೇವಋಷಿ, ರಾಜರ್ಷಿಗಳೆಂಬ ವಿಧಗಳಿವೆ. ದೇವತೆಗಳಲ್ಲಿ ವಿಧಗಳಿವೆ. ಬ್ರಹ್ಮದರ್ಶನವಾದ ಬಳಿಕವೂ ದೇವತೆಗಳು ಶ್ರವಣಾದಿಗಳನ್ನು ಬಿಡುವುದಿಲ್ಲ. ಅದೇಕೆಂದರೆ ಸುಖಾಧಿಕ್ಯಕ್ಕಾಗಿ. ಈ ಜಗತ್ತು ಸೃಷ್ಟಿಯಾಗುವ ಮುನ್ನ ಇದ್ದದ್ದು ದೇವರೊಬ್ಬನೆ. “ಏಕೋ ನಾರಾಯಣಃ ನ ಬ್ರಹ್ಮನ ಚ ಶಂಕರಃ’…ಮೊದಲು ಬಂದ ಭಗವಂತ ಜಗತ್ತು ಸೃಷ್ಟಿಸಿದ, ಅದರಲ್ಲಿ ಜೀವಿಗಳನ್ನು ಸೃಷ್ಟಿಸತೊಡಗಿದ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811