Advertisement

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

04:58 PM Nov 08, 2024 | Team Udayavani |

ಗೀತೆಯ 2ನೇ ಅಧ್ಯಾಯದಲ್ಲಿ ಕೃಷ್ಣ ಹೇಳುವ ಮೊದಲ ಶ್ಲೋಕವನ್ನು ಶೋಧನೆ ಮಾಡುವುದು ಸಮಸ್ಯಾಪರಿಹಾರಕರೆಲ್ಲರಿಗೆ ಮಾರ್ಗದರ್ಶಿ. ಕುತಸ್ತ್ವಾ = ಎಲ್ಲಿಂದ ಬಂತು? ಯಾವುದೇ ರೋಗಗಳಿಗೆ ಚಿಕಿತ್ಸೆ ಮಾಡುವವರು ರೋಗಿಯಲ್ಲಿ ಕೇಳುವ ಮೊದಲ ಮಾತು “ಇದು ಎಲ್ಲಿಂದ ಬಂತು?’. ರೋಗ ಯಾವ ಕಾರಣದಿಂದ ತಗುಲಿತು ಎಂದು ತಿಳಿದಾಗ ಚಿಕಿತ್ಸೆ (ಔಷಧಿ) ಕೊಡುವುದು ಸಾಧ್ಯವಾಗುತ್ತದೆ, ಪರಿಣಾಮಕಾರಿಯಾಗುತ್ತದೆ.

Advertisement

ಈ ಮಾತಿನಿಂದಲೇ ಶ್ರೀಕೃಷ್ಣ ಒಬ್ಬ ಚಿಕಿತ್ಸಕ ಎಂಬುದು ಮೊದಲ ಪ್ರತಿಕ್ರಿಯೆಯಿಂದಲೇ ಶತಃಸಿದ್ಧವಾಗುತ್ತದೆ. ಮಂಡನಮಿಶ್ರರಲ್ಲಿ ಶಂಕರಾಚಾರ್ಯರು ವಾದಿಸಲು ಬಂದಾಗ “ಕುತಸ್ತ್ವಾ’ ಎಲ್ಲಿಂದ ಬಂದಿರಿ? ಎಂದು ಕೇಳುತ್ತಾರೆ. ಇಲ್ಲಿ ಅರ್ಜುನನ ಕಾಯಿಲೆ ಸ್ವಂತಧ್ದೋ? ಬೇರೆಯವರಿಂದ ಬಂದದ್ದೊ? ಸ್ವಭಾವದ ಪರಿಣಾಮವೋ? ಪ್ರಭಾವದ ಪರಿಣಾಮವೋ? ಈ ಕಶ್ಮಲ ಎಲ್ಲಿಂದ ಬಂತೆನ್ನುವುದು ಕೃಷ್ಣನ ಪ್ರಶ್ನೆ. ನಾನು ಹಿಂದೆ ಕಾಣುವುದಕ್ಕೂ ಈಗ ಕಾಣುವುದಕ್ಕೂ ವ್ಯತ್ಯಾಸವಿದೆಯಲ್ಲ? ಇದು ನಿಜರೂಪವಲ್ಲ ಎಂಬುದು “ಕುತಸ್ತ್ವಾ ಕಶ್ಮಲಮಿದಂ’ ಮಾತಿನಿಂದ ಅರ್ಥವಾಗುತ್ತದೆ. ಯಾವುದೇ ತಪ್ಪು ಕಂಡುಬಂದಾಗಲೂ ಅದರ ಮೂಲ ಏನು ಎನ್ನುವುದನ್ನು ಈಗಲೂ ಅಪರಾಧಪತ್ತೆ ವಿಭಾಗದವರು ಅನುಸರಿಸುತ್ತಾರೆ. ಸಮಸ್ಯೆ ಮೂಲಕ್ಕೆ ಚಿಕಿತ್ಸೆ ಮಾಡಿದರೆ ಮಾತ್ರ ಪ್ರಯೋಜನಕಾರಿ ಎನ್ನುವುದು ಶ್ರೀಕೃಷ್ಣಸಿದ್ಧಾಂತ. ಈ ಪ್ರಯೋಗದಿಂದ ಯಶಸ್ಸು ಕಂಡ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ

– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next