Advertisement

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

12:56 AM Sep 09, 2024 | Team Udayavani |

ಭಗವಂತನ ಆದೇಶವೆಂದರೆ ಅದು ಪ್ರಶ್ನಾತೀತ. ಅವನೇ ಸರ್ವಸ್ವ. ಆದ್ದರಿಂದಲೇ “ಧರ್ಮಸ್ಯಪ್ರಭುರಚ್ಯುತಃ’ ಎಂಬ ಮಾತು ಬಂದದ್ದು. ಒಂದು ಹಂತದಲ್ಲಿ ನಾವು ಪ್ರಶ್ನಾತೀತತೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಪ್ರಜಾಪ್ರಭುತ್ವದ ನೀತಿ ಪ್ರಕಾರ “ಈ ದೇಶದಲ್ಲಿ ಹುಟ್ಟಿದವರಿಗೆ ಮಾತ್ರ ಮತ ಚಲಾಯಿಸುವ ಹಕ್ಕು ಇರುತ್ತದೆ’. ಇದು ಏಕೆ ಎಂದು ಪ್ರಶ್ನಿಸಿದರೆ? ಹೀಗೆ ಪ್ರಶ್ನೆ ಮಾಡಲು ಅವಕಾಶವಿಲ್ಲ.

Advertisement

“ಪ್ರಬುದ್ಧರು ಮಾತ್ರ ಮತದಾನ ಮಾಡಿ’, “ಅಪ್ರಬುದ್ಧರು ಮತದಾನ ಮಾಡಬಾರದು’ ಎಂದು ನೀತಿ ಮಾಡಿದರೆ ಯಾರು ಪ್ರಬುದ್ಧರು? ಯಾರು ಅಪ್ರಬುದ್ಧರು? ಎಂದು ನಿರ್ಧರಿಸುವುದು. ಆದ್ದರಿಂದ ಹುಟ್ಟಿದ ಎಲ್ಲರಿಗೂ 21 ವರ್ಷವಾದರೆ ಮತದಾನ ಮಾಡಬಹುದು ಎಂದು ನೀತಿ ನಿರೂಪಿಸಿದರು. ಇದರಲ್ಲಿ ಕೊರತೆ ಇರಬಹುದು, ಆದರೆ ಇದಕ್ಕಿಂತ ಉತ್ತಮ ಮಾರ್ಗವಿಲ್ಲ. ಪ್ರತಿಯೊಂದಕ್ಕೂ ಮಿತಿ ಇರುತ್ತದೆ. “ಭಗವಧೀನತ್ವಾತ್‌ ಸರ್ವಸ್ಯ’ ಎಂದು ಹೇಳುವಾಗ “ಸರ್ವಸ್ಯ’ ಎಂದು ಹೇಳಲು ಕಾರಣ “ಆಂಶಿಕ’ ಅಲ್ಲ, “ಸರ್ವವೂ ಅವನು’ ಎಂಬುದಕ್ಕಾಗಿ.

ಕೆಲವು ಬಾರಿ “ಇದು ಮಾತ್ರ ದೇವರದ್ದೇ ಕೆಲಸ ಅನಿಸುತ್ತದೆ’ ಎಂದು ಹೇಳುವುದಿದೆ. ಇದರರ್ಥವೇನು? ಉಳಿದದ್ದು ನಮ್ಮ ಕೆಲಸವೆಂದೇ? ಹಾಗಲ್ಲ. ಎಲ್ಲವೂ ದೇವರದ್ದೇ ಕೆಲಸ ಎಂಬ ಭಾವ ಬರಬೇಕು. ಅರ್ಜುನನಿಗಿದ್ದ ಸಂಶಯ ನಿವಾರಣೆಯಾದದ್ದೇ “ಎಲ್ಲವೂ ಭಗವಂತನದು’ ಎಂದು ಖಾತ್ರಿಯಾದಾಗ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next