ಉಡುಪಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ಜ.11ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಘಟನೆಯ ಬಗ್ಗೆಆರೋಪಿ ಪರ ವಕೀಲ ಮಿತ್ರ ಕುಮಾರ್ ಶೆಟ್ಟಿ ಮಾತನಾಡಿ, ಜಾಮೀನು ಅರ್ಜಿ ಹಾಕಲಾಗಿದೆ. ಜ 2 ರಂದು ವಿಚಾರಣೆ ಇದೆ ಎಂದು ಹೇಳಿದ್ದಾರೆ.
ಕೋವಿಡ್ ಕಾಲದ ಆರ್ಥಿಕ ಮುಗ್ಗಟ್ಟಿನಿಂದ ಬರಬೇಕಾದ ಸಾಲದ ಹಣ ಬರಲಿಕ್ಕಿದ್ದು, ಆ ಮೊತ್ತ ಬಂದ ಬಳಿಕ ಹಣ ಹಿಂತಿರುಗಿಸುವೆ. ಜನರು ಹೆದರುವ ಅಗತ್ಯವಿಲ್ಲ. ಆ ಮೊತ್ತ ಬರದೆ ಇದ್ದರೆ ತಮ್ಮ ಆಸ್ತಿ ಮಾರಿ ಆದರೂ ಹಣ ಹಿಂತಿರುಗಿಸುವೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ವಕೀಲರು ಹೇಳಿದರು.
ಗ್ರಾಹಕರಿಗೆ ನೂರಾರು ಕೋಟಿ ರೂ. ವಂಚನೆಯ ಆರೋಪ ಹೊತ್ತಿರುವ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ಅವರನ್ನು ಮಂಗಳವಾರ ಉಡುಪಿಯ ಸೆನ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬ್ರಹ್ಮಾವರ ಸಮೀಪದ ಮಟಪಾಡಿಯಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ವಂಚನೆ ಬಗ್ಗೆ ದೂರು ದಾಖಲಾಗಿತ್ತು.