Advertisement
ಮಂಜೂರಾದ 240 ಎಚ್‌ಐಒ ಹುದ್ದೆಗಳ ಪೈಕಿ 28 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 212 ಹುದ್ದೆಗಳು ಖಾಲಿಯಿವೆ. 275 ಗ್ರೂಪ್ “ಡಿ’ ಹುದ್ದೆಗಳ ಪೈಕಿ 60 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 215 ಹುದ್ದೆಗಳು ಖಾಲಿಯಿವೆ.
Related Articles
Advertisement
ಗ್ರಾಮೀಣ ಭಾಗಕ್ಕೆ ಬೇಕಿದೆ ಹೆರಿಗೆ ತಜ್ಞರು
ಜಿಲ್ಲೆಯಲ್ಲಿ 7 ಮಂದಿ ಹೆರಿಗೆ ತಜ್ಞರಿಗೆ ಬೇಡಿಕೆಯಿದ್ದು, 3 ಮಂದಿ ಮಾತ್ರ ಕರ್ತವ್ಯ ನಿರ್ವಹಿಸಿಕೊಂಡಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಖಾಸಗಿ ಆಸ್ಪತ್ರೆಗಳ ಕೊರತೆ ಇರುವ ಕಾರಣ ಎಲ್ಲರೂ ಸರಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಕಾರ್ಕಳದಲ್ಲಿ ಶೀಘ್ರ ಹೆರಿಗೆ ತಜ್ಞರ ನೇಮಕ ಆಗಬೇಕೆಂಬ ಬಗ್ಗೆ ಇತ್ತೀಚೆಗೆ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಪರಿಶೀಲನೆ ಸಭೆಯಲ್ಲೂ ಆಗ್ರಹಿಸಲಾಗಿತ್ತು.
ಎನ್‌ಎಚ್‌ಎಂ ಹುದ್ದೆಗಳಲ್ಲಿ ಕೆಲವು ಖಾಲಿರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ 737 ಹುದ್ದೆಗಳು ಮಂಜೂರಾಗಿದ್ದು, 703 ಹುದ್ದೆಗಳು ಕಾರ್ಯನಿರ್ವಹಿಸಿಕೊಂಡಿವೆ. 34 ಹುದ್ದೆ ಬಾಕಿ ಉಳಿದಿದೆ. 3 ಮಂದಿ ಎಂಬಿಬಿಎಸ್ ವೈದ್ಯರು, 7 ನುರಿತ ವೈದ್ಯರು, ಒಬ್ಬರು ಸ್ಟಾಫ್ ನರ್ಸ್, 15 ಸಿಎಚ್‌ಒ, ಹೊರಗುತ್ತಿಗೆ ಆಧಾರದಲ್ಲಿ ಇಬ್ಬರು ಸಹಿತ ಇತರ 4 ಹುದ್ದೆಗಳು ಖಾಲಿಯಿವೆ.