Advertisement
ಎರಡೂ ಡೋಸ್ ಒಟ್ಟಿಗೆ 16,63,874 ಮಂದಿಗೆ ನೀಡಲಾಗಿದೆ. ಡಿ. 2ರಂದು 1,471 ಮಂದಿಗೆ ಮೊದಲ ಮತ್ತು 6,878 ಮಂದಿಗೆ ಎರಡನೆಯ ಡೋಸ್ ಲಸಿಕೆ ನೀಡಲಾಗಿದೆ.
ಉಡುಪಿ ನಗರದ ವಲಸೆ ಕಾರ್ಮಿಕ ರಿಗೆ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಡಿ. 5ರಂದು ಕಾರ್ಮಿಕರು ಕೆಲಸಕ್ಕೆ ಒಟ್ಟು ಸೇರುವ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡ ಲಾಗಿದೆ. ಪ್ರಥಮ ಡೋಸ್‌ನಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಸ್ತುತ 7ನೇ ಸ್ಥಾನದಲ್ಲೂ ಎರಡನೇ ಡೋಸ್‌ನಲ್ಲಿ 3ನೇ ಸ್ಥಾನದಲ್ಲೂ ಇದೆ. ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು
Related Articles
ಉಡುಪಿ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಮೂಲಕ ಎಲ್ಲ ಮನೆಯ ಲಸಿಕೆ ಪಡೆದವರ ವಿವರ ಸಂಗ್ರಹ ಮಾಡಲಾಗುತ್ತಿದೆ. ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೆ ತಮ್ಮ ಕುಟುಂಬದಲ್ಲಿ 18 ವರ್ಷ ತುಂಬಿದವರ ಸಂಖ್ಯೆ, ಅವರಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದವರ ಸಂಖ್ಯೆ, ಎರಡನೇ ಡೋಸ್ ಪಡೆದವರ ಸಂಖ್ಯೆ, ಪಡೆಯದೇ ಇರಲು ಕಾರಣ ಮತ್ತು ಡೋಸ್ ಪಡೆದ ದಿನಾಂಕ ಸಹಿತ ಮಾಹಿತಿಯನ್ನು ಭರ್ತಿಮಾಡಿ ನೀಡುವಂತೆ ಸೂಚಿಸಲಾಗಿದೆ.
Advertisement
ವಿದ್ಯಾರ್ಥಿಗಳು ನೀಡುವ ಮಾಹಿತಿಯನ್ನು ಸ್ಥಳೀಯ ಅರೋಗ್ಯಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಅವರು ಮನೆಗೆ ಭೇಟಿ ನೀಡಿ, ಲಸಿಕೆ ನೀಡುವ ಕಾರ್ಯ ಮಾಡಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.