Advertisement

Udupi:ಫೈನಾನ್ಸ್‌ ಮ್ಯಾನೇಜರ್‌, ಸಿಬ್ಬಂದಿ ಸೇರಿ 4 ಲಕ್ಷಕ್ಕೂ ಅಧಿಕ ಹಣ ವಂಚನೆ, ದೂರು ದಾಖಲು

02:59 PM Aug 31, 2024 | Team Udayavani |

ಉಡುಪಿ: ಇಲ್ಲಿನ ಖಾಸಗಿ ಫೈನಾನ್ಸ್‌ ಲಿಮಿಟೆಡ್‌ ವೊಂದಕ್ಕೆ ಮ್ಯಾನೇಜರ್‌ ಹಾಗೂ ಲೋನ್‌ ಆಫೀಸರ್‌ ಗಳು 4 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.

Advertisement

ಏನಿದು ವಂಚನೆ?

ಇಲ್ಲಿನ ಖಾಸಗಿ ಫೈನಾನ್ಸಿಯಲ್‌ ಲಿಮಿಟೆಡ್‌ ಉಡುಪಿ ಶಾಖೆಯಲ್ಲಿ ಕಳೆದ ಒಂದು ವರ್ಷದಿಂದ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್‌ ಲತೀಫ್‌ ಖಾಸಿಂ ಮುಲ್ಲಾ ಸಂಘದ ಸದಸ್ಯರಿಂದ ಕಂತಿನ ಪ್ರಕಾರ ಸಾಲದ ಹಣವನ್ನು ವಸೂಲಿ ಮಾಡುತ್ತಿದ್ದರು.

ಆದರೆ ಅಬ್ದುಲ್‌ ಲತೀಫ್‌ ಖಾಸಿಂ ಮುಲ್ಲಾ ಸಂಘದ ಸದಸ್ಯರು ಕಟ್ಟಿದ ಸಾಲದ ಹಣದಲ್ಲಿ 1,25,787 ರೂಪಾಯಿ ಹಣವನ್ನು ಫೈನಾನ್ಸಿಯಲ್‌ ಲಿಮಿಟೆಡ್‌ ಸಂಸ್ಥೆಗೆ  ಪಾವತಿಸದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದೆ.

ಇದನ್ನೂ ಓದಿ:PM Modi; ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪುಗಳು ಅಗತ್ಯ: ಪ್ರಧಾನಿ ಮೋದಿ

Advertisement

ಅದೇ ರೀತಿ ಲೋನ್‌ ಆಫೀಸರ್‌ ಗಳಾದ ಅಕ್ಷಯ್‌ 49,000 ರೂಪಾಯಿ ಹಾಗೂ ದೀಕ್ಷಿತ್‌ 3,00,000 ಲಕ್ಷ ರೂಪಾಯಿ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ಸಂಸ್ಥೆಯ ಮ್ಯಾನೇಜರ್‌ ಜತೆ ಸೇರಿ ಈ ಮೂವರು ಒಟ್ಟು 4,74,787 ರೂಪಾಯಿ ಹಣವನ್ನು ಸಂಸ್ಥೆಗೆ ಕಟ್ಟದೇ ವಂಚಿಸಿರುವುದಾಗಿ ಸಂಸ್ಥೆಯ ಹಿರಿಯ ಅಧಿಕಾರಿ ಬಸವರಾಜ ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ವರದಿ ತಿಳಿಸಿದೆ.

ಸಂಸ್ಥೆಯ ಹಿರಿಯ ಅಧಿಕಾರಿ ಬಸವರಾಜ, ಉಪಾಧ್ಯಕ್ಷ ಕೊಟ್ರೇಶ ಹಾಗೂ ರಾಜ್ಯ ಉಪಾಧ್ಯಕ್ಷ ಮಹೇಶ್‌ ಅವರು ಲೆಕ್ಕಪತ್ರ ಪರಿಶೀಲನೆ ಮಾಡಿದಾಗ ಈ ವಂಚನೆ ಬೆಳಕಿಗೆ ಬಂದಿರುವುದಾಗಿ ಉಡುಪಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next