Advertisement

Udupi “ಅಲ್ಪಸಂಖ್ಯಾಕರಿಗೂ ಸಪ್ತಪದಿ ವಿಸ್ತರಣೆ’

12:10 AM Nov 29, 2023 | Team Udayavani |

ಉಡುಪಿ: ಸಪ್ತಪದಿ ಯೋಜನೆಯನ್ನು ಅಲ್ಪಸಂಖ್ಯಾಕರಿಗೂ ವಿಸ್ತರಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಈಗಾಗಲೇ ಶಾದಿ ಭಾಗ್ಯ ಯೋಜನೆ ನಿಂತುಹೋಗಿದೆ. ಯೋಜನೆಯ ಹೆಸರು ಯಾವುದೇ ಇರಲಿ ಅದು ಎಲ್ಲ ಸಮುದಾಯದವರಿಗೂ ತಲುಪುವಂತಿರಬೇಕು ಎಂದು ರಾಜ್ಯ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ಹೇಳಿದರು.

Advertisement

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಮಂಗಳವಾರ ಅಲ್ಪಸಂಖ್ಯಾಕರ ಸಮುದಾಯದವರ ಕುಂದು-ಕೊರತೆ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಲ್ಪಸಂಖ್ಯಾಕರ ವಿವಿಧ ಯೋಜನೆಗಳ ವಿಧಾನಗಳನ್ನು ಮತ್ತಷ್ಟು ಸರಳಗೊಳಿಸುವ ಬಗ್ಗೆ ಬೇಡಿಕೆ ಬಂದಿದ್ದು, ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಕೆಲವು ಯೋಜನೆಗಳಿಗೆ 20ರಿಂದ 40ರಷ್ಟು ಗುರಿ ನೀಡಲಾಗುತ್ತದೆ. ಆದರೆ ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಕೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಲಾಟರಿ ಪದ್ಧತಿ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಅರ್ಜಿಗಳನ್ನು ಮೊಬೈಲ್‌ ಮೂಲಕವೂ ಸಲ್ಲಿಸಬಹುದು. ಅಲ್ಪಸಂಖ್ಯಾಕರ ಕುಂದುಕೊರತೆ ಸಭೆಗಳನ್ನು 6 ತಿಂಗಳಿಗೊಮ್ಮೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಖಬರಸ್ಥಾನ: 10 ಪ್ರಕರಣ ಬಾಕಿ
ಜಿಲ್ಲೆಯಲ್ಲಿ ಖಬರಸ್ಥಾನಕ್ಕೆ ಸಂಬಂಧಿಸಿದಂತೆ 10 ಪ್ರಕರಣಗಳು ಬಾಕಿಯಿವೆ. ಜಾಗ ನೀಡುವಂತೆ ಹೈಕೋರ್ಟ್‌ ಕೂಡ ನಿರ್ದೇಶನ ನೀಡಿದೆ. ಖಾಸಗಿ ನಿವೇಶನಗಳು ಲಭ್ಯವಿದ್ದರೆ ತಹಶೀಲ್ದಾರ್‌ ಖರೀದಿಸಿ ನೀಡಲಿದ್ದಾರೆ. 3 ಹಳ್ಳಿಗಳ ನಡುವೆ ಸರಕಾರಿ ಅಥವಾ ಖಾಸಗಿ ಮಾರಾಟದ ನಿವೇಶನಗಳಿದ್ದರೆ ಅದನ್ನು ಮುಖಂಡರು ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ತಿಳಿಸಿದರು.

Advertisement

ಹೆಚ್ಚುವರಿ ಅನುದಾನ ಬೇಡಿಕೆ
ರಾಜ್ಯ ಸರಕಾರ ಅಲ್ಪಸಂಖ್ಯಾಕ ಇಲಾಖೆಗೆ 2,100 ಕೋ.ರೂ. ನೀಡುತ್ತಿದೆ. ಇದನ್ನು ಕನಿಷ್ಠ 5 ಸಾವಿರ ಕೋ.ರೂ.ಗೆ ಹೆಚ್ಚಿಸಬೇಕು. ಅರಿವುಯೋಜನೆಯ ಮೂಲಕ ಸಣ್ಣಪುಟ್ಟಕೋರ್ಸ್‌ ಮಾಡುವವರಿಗೂ ಕನಿಷ್ಠ 1ಲ.ರೂ. ಸಹಾಯ ಧನ ನೀಡುವ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡ ಲಾಗುವುದು ಎಂದರು.

ಮಾದಕ ದ್ರವ್ಯ ವ್ಯಸನ: ಸೂಕ್ತ ವಿಚಾರಣೆ ಅಗತ್ಯ
ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾದಾಗ ಕನಿಷ್ಠ 10 ಮಂದಿಯನ್ನಾದರೂ ವಿಚಾರಣೆಗೊಳಪಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಬೇಕಿರುವ ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆ ಹಾಕಬೇಕು ಎಂದರು.

ವಿಶೇಷಾಧಿಕಾರಿ ಮುಜಿಬುಲ್ಲ ಜಫಾರಿ, ವಕ್ಫ್ ಸಲಹಾ ಮಂಡಳಿ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್‌ ಮುಸ್ತಲಿಫ್, ಮಾಜಿ ಅಧ್ಯಕ್ಷ ಯಹಿØಯಾ ನಕ್ವ, ಅಲ್ಪಸಂಖ್ಯಾಕರ ಇಲಾಖೆಯ ಅಧಿಕಾರಿ ಪೂರ್ಣಿಮಾ ಸೂರಿ, ವಕ್ಫ್ ಅಧಿಕಾರಿ ಅಮ್ಜದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next