Advertisement

ಉಡುಪಿ: “ಮಧ್ವಾಂಗಣ’ನಿರ್ಮಾಣಕ್ಕೆ ಚಾಲನೆ

07:35 AM Sep 10, 2017 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ಎಲ್ಲ ಕಾರ್ಯಕ್ರಮಗಳಿಗೆ ವೇದಿಕೆಯಾಗುವ ರಾಜಾಂಗಣದ ನವೀಕರಣ ಹಾಗೂ ರಾಜಾಂಗಣದ ಮಾದರಿಯಲ್ಲೇ ಅದರ ಮೇಲೆ ಮೊದಲ ಮಹಡಿ ನಿರ್ಮಾಣಗೊಳ್ಳಲಿದ್ದು, ಅದಕ್ಕೆ ಮಧ್ವಾಂಗಣ ಎಂದು ಹೆಸರಿಡಲಾಗಿದೆ. ಅಲ್ಲಿವರೆಗೆ ಮಠದ ಕಾರ್ಯಕ್ರಮಗಳಿಗೆ ತಾತ್ಕಾಲಿಕ ರಾಜಾಂಗಣವನ್ನು ಪಾರ್ಕಿಂಗ್‌ ಸ್ಥಳದಲ್ಲಿ ನಿರ್ಮಿಸಲಾಗಿದೆ.

Advertisement

ಮೊದಲ ಮಹಡಿಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಸ್ಥಳೀಯ ಎಂಜಿನಿಯರ್‌ ನೇತೃತ್ವದಲ್ಲಿ ಬೆಂಗಳೂರಿನ ಮೆಟಲ್‌ ಕರ್ಮ ಕಂಪೆನಿ ಮಹಡಿ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. ಮಧ್ವಾಂಗಣವೂ ಕಾರ್ಯಕ್ರಮ ಆಯೋಜನೆ, ವಿಶೇಷ ದಿನಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಗೆ ಅನುಕೂಲವಾಗುವಂತೆ ನಿರ್ಮಾಣವಾಗಲಿದೆ.

ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳಿಗೂ ವೇದಿಕೆಯಾಗಲಿದೆ. ಶ್ರೀಕೃಷ್ಣ ಮಠದ ಪ್ರಮುಖ ಅನ್ನಛತ್ರವಾಗಿರುವ ಅನ್ನಬ್ರಹ್ಮದಿಂದ ನೇರವಾಗಿ ಮಧ್ವಾಂಗಣಕ್ಕೆ ಪ್ರವೇಶಿಸಲು ಕನೆಕ್ಟಿಂಗ್‌ ಬ್ರಿಜ್‌ ನಿರ್ಮಾಣಗೊಳ್ಳಲಿದೆ.

ತಾತ್ಕಾಲಿಕ ಸಭಾಂಗಣ
ನೂತನ ಮಧ್ವಾಂಗಣ ನಿರ್ಮಾಣದ ಕಾಮಗಾರಿಯ ಸಲುವಾಗಿ ಮಠದ ಪಾರ್ಕಿಂಗ್‌ ಸ್ಥಳದಲ್ಲಿ ತಾತ್ಕಾಲಿಕ ರಾಜಾಂಗಣವನ್ನು ನಿರ್ಮಿಸಲಾಗಿದ್ದು, ನೂತನ ಸಭಾಂಗಣವನ್ನು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶನಿವಾರ ಉದ್ಘಾಟಿಸಿದರು. ಸೆ. 13, 14ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲ
ಪಿಂಡಿಯ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ತಾತ್ಕಾಲಿಕ ಸಭಾಂಗಣದಲ್ಲಿ ನಡೆಯಲಿವೆ.

2 ತಿಂಗಳಲ್ಲಿ ಪೂರ್ಣ 
ಮುಂದಿನ 2 ತಿಂಗಳಲ್ಲಿ ಅಂದರೆ ನವೆಂಬರ್‌ ಮೊದಲ ವಾರದಲ್ಲಿ ಮಹಡಿಯ ಕಾಮಗಾರಿ ಪೂರ್ಣಗೊಳ್ಳಲಿದೆ. ನ. 24ರಿಂದ 26ರ ವರೆಗೆ ನಡೆಯುವ ಧರ್ಮ ಸಂಸತ್‌ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳು ನಡೆಯಲಿರುವ ಕಾರಣ
ತ್ವರಿತಗತಿಯಲ್ಲಿ ಪೂರ್ಣಗೊಳ್ಳುವುದು ಅನಿವಾರ್ಯ. 

Advertisement
Advertisement

Udayavani is now on Telegram. Click here to join our channel and stay updated with the latest news.

Next