Advertisement
ಪರ್ಕಳದ ಯತಿರಾಜ್ ವಂಚನೆಗೊಳಗಾದವರು. ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಮಿಷ ಒಡ್ಡಿದ ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ತಿಳಿಸಿದರು. ಅದರಂತೆ ಹಂತಹಂತವಾಗಿ ಒಟ್ಟು 43.43 ಲಕ್ಷ ರೂ. ಹಣ ಪಾವತಿಸಿದ್ದಾರೆ. ಹೂಡಿಕೆ ಮಾಡಿದ ಹಣ ಸಹಿತ ಲಾಭಾಂಶವನ್ನೂ ನೀಡದೆ ವಂಚನೆ ಮಾಡಲಾಗಿದೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಉಡುಪಿ: ಮಣಿಪಾಲದ ಸಗ್ರಿಯಲ್ಲಿ ನಡೆದ ಬ್ಯಾಟರಿ ಕಳ್ಳತನದ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ವೃತ್ತ ನಿರೀಕ್ಷಕ ದೇವರಾಜ್ ಟಿ.ವಿ., ಠಾಣಾಧಿಕಾರಿಗಳಾದ ರಾಘವೇಂದ್ರ, ಅಕ್ಷಯ ಕುಮಾರಿ, ಸಿಬಂದಿ ಪ್ರಸನ್ನ, ವಿವೇಕ್, ಇಮ್ರಾನ್, ಚೆನ್ನೇಶ್ ಹಾಗೂ ಇತರ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.