Advertisement

ಉಡುಪಿ ಜಿಲ್ಲೆಯಲ್ಲಿ ಮೂವರಿಗೆ ಪಾಸಿಟಿವ್ ; ಜಿಲ್ಲಾಡಳಿತ ಏನು ಮಾಡುತ್ತಿದೆ –ಇಲ್ಲಿದೆ ವಿವರ

09:02 AM Mar 30, 2020 | Hari Prasad |

ಉಡುಪಿ: ಜಿಲ್ಲೆಯಲ್ಲಿ ಮೊದಲ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾದ ನಾಲ್ಕು ದಿನಗಳ ಬಳಿಕ ಇಂದು ಮತ್ತೆ ಎರಡು ಮಂದಿಯಲ್ಲಿ ಈ ಸೋಂಕು ಪಾಸಿಟಿವ್ ವರದಿ ಬಂದಿದೆ. ಇದು ಜಿಲ್ಲೆಯ ಜನತೆಯ ಆತಂಕವನ್ನು ಹೆಚ್ಚಿಸಿದೆ. ಪಕ್ಕದ ದಕ್ಷಿಣ ಕನ್ನಡದಲ್ಲಿ ಕೋವಿಡ್ 19 ಸೋಂಕು ಪೀಡಿತರ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಉಡುಪಿಯಲ್ಲಿ ಮಾತ್ರ ಈ ಮಾಹಾಮಾರಿ ನಿಯಂತ್ರಣದಲ್ಲಿತ್ತು. ಆದರೆ ಇಂದು ಮತ್ತೆ ಎರಡು ಪ್ರಕರಣಗಳು ಪತ್ತೆಯಾಗಿರುವುದು ಸಹಜವಾಗಿಯೇ ಜಿಲ್ಲೆಯ ಜನರ ಆತಂಕವನ್ನು ಹೆಚ್ಚು ಮಾಡಿದೆ.

Advertisement

ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿನ ಇದುವರೆಗಿನ ಕೋವಿಡ್ 19 ಸಂಬಂಧಿತ ಅಪ್ಡೇಟ್ಸ್ ಹೀಗಿದೆ.

– ಜಿಲ್ಲೆಯಲ್ಲಿ ಈತನಕ ಒಟ್ಟು ನಿಗಾ/ತಪಾಸಣೆಗೆ ಒಳಗಾದವರ ಸಂಖ್ಯೆ: 1992

– ಮಾರ್ಚ್ 28ರ ಶನಿವಾರ ಹೋಮ್ ಕ್ವಾರೆಂಟೈನ್ ಗೆ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ: 106

– 14 ದಿನಗಳ ಹೋಮ್ ಕ್ವಾರೆಂಟೈನ್ ಪೂರ್ಣಗೊಳಿಸಿದವರ ಸಂಖ್ಯೆ: 842

Advertisement

– 28 ದಿನಗಳ ಹೋಮ್ ಕ್ವಾರೆಂಟೈನ್ ಪೂರ್ಣಗೊಳಿಸಿದವರು: 95 ಜನ

– ಮಾರ್ಚ್ 29ರವರೆಗೆ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಗೆ ದಾಖಲುಗೊಂಡವರ ಸಂಖ್ಯೆ: 30

– ಇಲ್ಲಿಯವರೆಗೆ ತಪಾಸಣೆಗೆ ಕಳುಹಿಸಲಾದ ಮಾದರಿಗಳ (ಸ್ಯಾಂಪಲ್) ಸಂಖ್ಯೆ: 128

– ತಪಾಸಣಾ ವರದಿಯಲ್ಲಿ ನೆಗೆಟಿವ್ ವರದಿ ಪಡೆದುಕೊಂಡವರು 122 ಮಂದಿ ಮತ್ತು ಪಾಸಿಟಿವ್ ಕಂಡುಬಂದಿದ್ದು 3 ಮಂದಿಯಲ್ಲಿ. ಇನ್ನೂ 3 ಸ್ಯಾಂಪಲ್ ಗಳ ವರದಿ ಬರಬೇಕಿದೆ.

– ಆಸ್ಪತ್ರೆ ನಿಗಾದಲ್ಲಿರುವವರು: 55 ಜನ

– ಶನಿವಾರದಂದು ಆಸ್ಪತ್ರೆಯ ಐಸೊಲೇಷನ್ ಗೆ ದಾಖಲುಗೊಂಡವರ ಸಂಖ್ಯೆ: 55

– ಇಲ್ಲಿಯವರೆಗೆ ಮನೆ ಮತ್ತು ಆಸ್ಪತ್ರೆ ನಿಗಾದಲ್ಲಿರುವವರ ಒಟ್ಟು ಸಂಖ್ಯೆ: 970

(ಒಟ್ಟು ನಿಗಾ/ ತಪಾಸಣೆಯ 1,992ರಿಂದ 14+28 ದಿನಗಳ ಮನೆ ನಿಗಾ ಪೂರೈಸಿದ 842 + 95 ಮಂದಿಯನ್ನು ಕಳೆದರೆ ಬರುವ 1,055ರಿಂದ ಆಸ್ಪತ್ರೆಯ ಕ್ವಾರಂಟೈನಿಗೆ ದಾಖಲಾದ 30+ ಆಸ್ಪತ್ರೆ ನಿಗಾದಲ್ಲಿರುವ 55 ಮಂದಿ ಸಹಿತ ಒಟ್ಟು 85ಮಂದಿಯನ್ನು ಕಳೆದರೆ ಬರುವ ಉತ್ತರವೇ 970).

ಇನ್ನು ಜಿಲ್ಲಾಡಳಿತವು ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಲು ಮಾರ್ಚ್ 29ರಿಂದ ನಿರ್ಧರಿಸಿದೆ. ಈ ಪ್ರಕಾರವಾಗಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಗಳರೆಗೆ ಮಾತ್ರವೇ ಅವಕಾಶ ನೀಡಲಾಗಿದೆ. ಮೆಡಿಕಲ್, ಚಿಕಿತ್ಸಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಈ ನಿರ್ಧಿಷ್ಟ ಸಮಯದಲ್ಲಿ ಮಾತ್ರವೇ ತೆರೆದಿರಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಧಿಕಾರಿಯವರು ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ಗಡಿ ಭಾಗಗಳನ್ನು ಮುಚ್ಚಲಾಗಿದ್ದು ತುರ್ತು ಸೇವಾ ಸಂಚಾರವನ್ನು ಹೊರತುಪಡಿಸಿ ಜಿಲ್ಲೆಯಿಂದ ಹೊರಗೆ ಹೋಗುವ ಮತ್ತು ಒಳಗೆ ಬರಲು ಯಾರಿಗೂ ಅವಕಾಶ ಇಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next