Advertisement
ಎರಡು ಶವಗಳ ಅಂಗಾಂಗಗಳ ಮಾದರಿಯನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗ ಮತ್ತು ಮಣಿಪಾಲಕ್ಕೆ ಕಳುಹಿಸಿ ಕೊಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 6 ಮಂದಿ ಸಂಶಯಾಸ್ಪದ ಮಂಗನಕಾಯಿಲೆ ತಪಾಸಣೆಗಾಗಿ ದಾಖಲಾಗಿದ್ದು ಇದುವರೆಗೆ ಯಾರಲ್ಲಿಯೂ ಮಂಗನ ಕಾಯಿಲೆ ದೃಢಪಟ್ಟಿಲ್ಲ. ಒಟ್ಟು 28 ಮಂಗಗಳ ಅಂಗಾಂಗ ಮಾದರಿಯನ್ನು ಪರೀಕ್ಷೆಗ ಕಳುಹಿಸಲಾಗಿದ್ದು 21 ಮಾದರಿಗಳ ವರದಿ ಬಂದಿದೆ. 12 ಮಾದರಿಗಳಲ್ಲಿ ಮಂಗನ ಕಾಯಿಲೆ ರೋಗಾಣು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ 119 ಮಂದಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. 47 ಮಂದಿಗೆ ಮಂಗನ ಕಾಯಿಲೆ ಇರುವುದು ದೃಢವಾಗಿದೆ. 66 ಮಂದಿಗೆ ಕಾಯಿಲೆ ಇಲ್ಲವೆಂದು ವರದಿಯಾಗಿದೆ. 9 ಮಂದಿಯ ವರದಿ ಬರಲು ಬಾಕಿ ಇದೆ. 90 ಮಂದಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೆ ಜ್ವರ ಮರುಕಳಿಸಿದ್ದರಿಂದ ಮರಳಿ ದಾಖಲಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಮಾಂಟ್ರಾಡಿ: ಕೋತಿಯ ಶವ ಪತ್ತೆ
ಮೂಡುಬಿದಿರೆ: ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಮಾಂಟ್ರಾಡಿ ಮಾರಂಗಲ್ಲು ಪ್ರದೇಶದಲ್ಲಿ ಗುರುವಾರ ಕೋತಿಯ ಶವ ಪತ್ತೆಯಾಗಿದೆ. ಇದು ಮೂಡುಬಿದಿರೆ ಪರಿಸರದಲ್ಲಿ ಎರಡನೇ ಪ್ರಕರಣ.