Advertisement

ಶಾಲೆ ಸುಧಾರಣೆಯಾದರೆ ಕನ್ನಡ ಎಂದಿಗೂ ಜೀವಂತ

01:23 AM Apr 17, 2022 | Team Udayavani |

ಕುಂದಾಪುರ: ಆಡುಭಾಷೆಯಾಗಿ ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ಕೊಟ್ಟರೆ ಮಾತ್ರ ನೂರಾರು ವರ್ಷಗಳ ಕಾಲ ಜೀವಂತವಾಗಿರುತ್ತದೆ. ಆದರೆ ನಮ್ಮಕನ್ನಡ ಶಾಲೆಗಳ ಪರಿಸ್ಥಿತಿ ಮಾತ್ರ ಶೋಚ
ನೀಯವಾಗಿದ್ದು, ಇಲ್ಲಿ ಅಮೂಲಾಗ್ರಬದಲಾವಣೆ ಆಗಬೇಕಿದೆ. ಆ ದಿಸೆಯಲ್ಲಿ ಸರಕಾರದ ಜತೆಗೆ ಸಂಘಟನೆ
ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ ಎಂದು ಮೂಡುಬಿದಿರೆ ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ಕುಂದಾಪುರದ ಬೋರ್ಡ್‌ ಹೈಸ್ಕೂಲಿನ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ 15ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ನಮ್ಮಲ್ಲಿ ಕಳೆದ 12 ವರ್ಷಗಳಿಂದ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಪ್ರತೀ ವರ್ಷ ನೂರಕ್ಕೂ ಮಿಕ್ಕಿ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಪ್ರತೀ ವರ್ಷವೂ ಒಳ್ಳೆಯ ಫಲಿತಾಂಶವೂ ಬರುತ್ತಿದೆ. ಇಲ್ಲಿನ ಗುಣಮಟ್ಟದ ಶಿಕ್ಷಣಮೆಚ್ಚಿ, ಈ ವರ್ಷ 11 ಸಾವಿರಕ್ಕೂ ಅಧಿಕ ಮಂದಿ ಆಕಾಂಕ್ಷಿ ವಿದ್ಯಾರ್ಥಿಗಳು ಬಂದಿರುವುದು, ಕನ್ನಡದ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೆ. ಈ ರೀತಿಯ ಬೆಳವಣಿಗೆ ಎಲ್ಲ ಕಡೆಗಳಲ್ಲಿಯೂ ಆಗಬೇಕಿದೆ. ಕನ್ನಡ ಶಾಲೆಗಳು ಎಂದಿಗೂ ಸೋಲಬಾರದು. ಎಂದವರು ಹೇಳಿದರು.

ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಬೆಂಗಳೂರಿನಲ್ಲಿ ಬೇರೆ ಭಾಷೆಯ ಅತಿಯಾದ ಬಳಕೆಯಿಂದಾಗಿ ಕನ್ನಡಕ್ಕೆ ಉಸಿರುಗಟ್ಟಿಸುವ ಪರಿಸ್ಥಿತಿಯಿದೆ. ಇತ್ತೀಚಿನ ದಿನಗಳಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿರುವುದು ಆತಂಕ
ಕಾರಿ ಸಂಗತಿ ಎಂದು ಸಮಾರೋಪ ಭಾಷಣದಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಎ.ಎಸ್‌.ಎನ್‌. ಹೆಬ್ಟಾರ್‌ ಮಾತನಾಡಿದರು.

Advertisement

ಇದನ್ನೂ ಓದಿ:ಸಂಭ್ರಮದಿಂದ ಜರುಗಿದ ಬಿಳಿಗಿರಿ ರಂಗನಾಥನ ಜಾತ್ರೆ

ಯುವಕರು ಹೆಚ್ಚೆಚ್ಚು ಬರೆಯುವಂತಾಗಬೇಕು
ಸಮ್ಮೇಳನಾಧ್ಯಕ್ಷ ಡಾ| ಎ.ವಿ. ನಾವಡ ಮಾತನಾಡಿ, ಕುಂದಾಪುರ ಕನ್ನಡದಲ್ಲಿ ಬರವಣಿಗೆ ಹೆಚ್ಚಾಗಬೇಕು. ಹಿರಿಯ ಸಾಹಿತಿಗಳು, ಬರಹಗಾರರು ಆ ನೆಲೆಯಲ್ಲಿ ಮುಂದಡಿಯಿಡಬೇಕು. ಯುವಕರನ್ನು ಹೆಚ್ಚೆಚ್ಚು ಬರೆಯುವಂತೆ ಉತ್ತೇಜಿಸಬೇಕು. ಕನ್ನಡ ಶಾಲೆಗಳ ಅಭ್ಯುದಯ ನಿಟ್ಟಿನಲ್ಲಿ ನಾವೆಲ್ಲರೂ ಮತ್ತೂಮ್ಮೆ ಆಲೋಚನೆ ಮಾಡಬೇಕಾದ ಅಗತ್ಯವಿದೆ ಎಂದರು.

ನಿರ್ಣಯ
ಸಮ್ಮೇಳನದಲ್ಲಿ ಕುಂದಾಪುರ ಕನ್ನಡ ಅಕಾಡೆಮಿ ಹಾಗೂ ಮಂಗಳೂರು ವಿ.ವಿ.ಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭವಾಗಬೇಕು ಎನ್ನುವ ಎರಡು ನಿರ್ಣಯವನ್ನು ಕೈಗೊಳ್ಳಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next