Advertisement
ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ದಿನವಹಿ ಅಗತ್ಯದ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು ಮಾತ್ರ ತೆರೆದಿದ್ದರೆ, ಎರಡು ದಿನ ಗಳಿಂದ ಬಹುತೇಕ ಸಣ್ಣ ಪುಟ್ಟ ಅಂಗಡಿಗಳು ತೆರೆದು ವ್ಯವಹಾರ ನಡೆಸುತ್ತಿವೆ. ಇಲೆಕ್ಟ್ರೀಶಿ ಯನ್, ಪ್ಲಂಬರ್‌ಗಳು ಮನೆಮನೆಗಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಬೆಳಗ್ಗೆ 7ರಿಂದ 11 ಗಂಟೆವರೆಗೆ ಮಾತ್ರ ಶಾಪ್‌ಗ್ಳು ತೆರೆದಿ ರುತ್ತಿದ್ದು, ಮೇ 3ರ ಬಳಿಕ ಸಮಯದ ವಿಸ್ತರಣೆ ಆಗಬಹುದೇ ಎಂಬ ನಿರೀಕ್ಷೆ ಇದೆ.
Related Articles
ಶೇ. 40ರಷ್ಟು ಪ್ರಯಾಣಿಕರನ್ನು ಕರೆ ದೊಯ್ಯಲು ಅವಕಾಶ ಕೊಡುವಾಗ ಪ್ರಯಾಣ ದರವನ್ನೂ ಹೆಚ್ಚಿಸಲು ಜಿಲ್ಲಾಡಳಿತ ಅನುಮತಿ ಕೊಡಬೇಕು. ಈ ನಿಟ್ಟಿನಲ್ಲಿ ಬಸ್ ಮಾಲಕರ ಸಂಘದ ಸಭೆ ಕರೆಯಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೇನೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಮತ್ತು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ. ಖಾಸಗಿಯವರು ಪ್ರಯಾಣದರ ಹೆಚ್ಚಿಸಿದರೆ ಕೆಎಸ್ಸಾರ್ಟಿಸಿಯವರೂ ಪ್ರಯಾಣದರ ಹೆಚ್ಚಿಸುವ ಸಾಧ್ಯತೆ ಇದೆ.
Advertisement
ಪ್ರಸ್ತುತ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಡಿಪೋ ಗಳಲ್ಲಿ ನಿಲ್ಲಿಸಲಾಗಿದೆ. ತೆರಿಗೆ ಪಾವತಿಸಬೇಕಾದ ಕಾರಣ ಖಾಸಗಿ ಬಸ್ಸುಗಳ ಪರ್ಮಿಟ್‌ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸರೆಂಡರ್ ಮಾಡಲಾಗಿದೆ.
ರಿಯಾಯಿತಿ ನಿರೀಕ್ಷೆಮೇ 3ರ ಬಳಿಕದ ಸ್ಥಿತಿಗತಿ ಕುರಿತು ಕೇಂದ್ರ ಸರಕಾರ ಮೇ 2ರಂದು ಮಾರ್ಗದರ್ಶಿ ಸೂತ್ರ ಗಳನ್ನು ಹೊರಡಿಸಲಿದ್ದು, ಅದರನ್ವಯ ರಾಜ್ಯ ಸರಕಾರ ನಿರ್ಧಾರ ಪ್ರಕಟಿಸಲಿದೆ. ಹಸುರು ವಲಯದಲ್ಲಿರುವ ಉಡುಪಿಗೆ ರಿಯಾಯಿತಿ ನಿರೀಕ್ಷೆಯೂ ಇದೆ. ಜಿಲ್ಲೆಯಿಂದ ಜಿಲ್ಲೆಗೆ ಜನರನ್ನು ಕಳುಹಿಸಲು ಜಿಲ್ಲಾಡಳಿತ ಕ್ರಮ ಕೈಕೊಂಡಿದ್ದು, ರಾಜ್ಯದಿಂದ ರಾಜ್ಯಕ್ಕೆ ಜನ ಸಂಚಾರದ ರೂಪುರೇಖೆಗಳು ಸಿದ್ಧಗೊಳ್ಳುತ್ತಿವೆ. ಮೇ 3ರ ಅನಂತರದ ಚಿತ್ರಣ ಮೇ 2ರಂದು ಸಿಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಬಸ್ ಶುರುವಾಗುತ್ತಾ?
ಮೇ 3ರ ಬಳಿಕ ಜಿಲ್ಲೆಯೊಳಗೆ ಸಂಚರಿಸಲು ಬಸ್ಸುಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದ್ದರೂ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತಿದೆ. ಬಸ್ಸುಗಳಲ್ಲಿ ಸಾಮರ್ಥ್ಯದ ಶೇ.40ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕೆಂಬ ನಿಯಮ ಕಾರ್ಯಸಾಧ್ಯವಲ್ಲ ಎನ್ನುತ್ತಾರೆ ಖಾಸಗಿ ಬಸ್ ಮಾಲಕರು. ಕೆಎಸ್ಸಾರ್ಟಿಸಿ ಬಸ್ಸುಗಳಾದರೂ ಶೇ. 40ರಷ್ಟು ಪ್ರಯಾಣಿಕರನ್ನು ಕರೆದೊಯ್ಯಬಹುದು. ಏಕೆಂದರೆ ಕೆಎಸ್ಸಾರ್ಟಿಸಿ ಸರಕಾರದ್ದು. ಕೆಎಸ್ಸಾರ್ಟಿಸಿಯವರಿಗೆ ಸಂಗ್ರಹವಾದ ಮೊತ್ತದ ಮೇಲೆ ತೆರಿಗೆ ವಿಧಿಸುತ್ತಾರೆ. ಖಾಸಗಿಯವರಿಗೆ ಸೀಟು ಸಂಖ್ಯೆಯ ಆಧಾರದಲ್ಲಿ ತೆರಿಗೆ ವಿಧಿಸುತ್ತಾರೆ ಎಂಬ ವಾದ ಇವರದು.