ಉಡುಪಿ: ಜಿಲ್ಲಾಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ 115 ಕೋ.ರೂ. ವೆಚ್ಚದ ಯೋಜನೆ ಗುರುವಾರ ಬೆಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿದ್ದು, ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಸಂಭ್ರಮಾಚರಣೆ ನಡೆಯಿತು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅವರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಂಭ್ರಮ ಆಚರಿಸಲಾಯಿತು.
ಜಿಲ್ಲಾ ಸರ್ಜನ್ ಡಾ| ಮಧುಸೂದನ್ ನಾಯಕ್ ಮಾತನಾಡಿ ಬಹುಕಾಲದ ಕನಸು ನನಸಾಗಿದೆ. ಜಿಲ್ಲಾಸ್ಪತ್ರೆಯ ಬಹು
ನಿರೀಕ್ಷಿತ ಬೇಡಿಕೆಗಳಾದ 1961ರ ಮಂಗಳೂರು ಹೆಂಚಿನ ಕಟ್ಟಡ ನವೀಕೃತಗೊಳ್ಳುವುದರ ಜತೆಗೆ ಸಿಬಂದಿ ಕೊರತೆ ಕೂಡ ಪರಿಹಾರ ಕಾಣಲಿದೆ ಎಂದರು.
2001ರಿಂದ ಎರಡು ಬಾರಿ ಸಂಪುಟದ ಆರ್ಥಿಕ ವಿಭಾಗದಲ್ಲಿ ತಿರಸ್ಕೃತಗೊಂಡ ನವೀಕೃತ ಜಿಲ್ಲಾಸ್ಪತ್ರೆ ಯೋಜನೆಯನ್ನು ಎದೆಗುಂದದೆ ಮತ್ತೆ ಹಳಿಗೆ ತರುವಲ್ಲಿ ಶಾಸಕ ರಘುಪತಿ ಭಟ್ ಮಾಡಿದ್ದಾರೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಶ್ಲಾ ಸಿದರು.
ಉಡುಪಿ ಜನತೆಯ ಬಹು ನಿರೀಕ್ಷಿತ ಜಿಲ್ಲಾಸ್ಪತ್ರೆ ನವೀಕರಣ ಯೋಜನೆ ಸಂಪುಟದಲ್ಲಿ ಅನುಮೋದನೆಗೊಳ್ಳಲು ಕಾರಣಕರ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಹಾಗೂ ಹಾಲಿ ಅರೋಗ್ಯ ಸಚಿವರಾದ ಶ್ರೀರಾಮುಲು ಮತ್ತು ಡಾ| ಸುಧಾಕರ್, ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಮಹೇಶ್ ಠಾಕೂರ್ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾಸ್ಪತ್ರೆಯ ಮೂಳೆತಜ್ಞ ಡಾ| ಗಣೇಶ್ ನಾಯಕ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಇದ್ದರು ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ನಿರೂಪಿಸಿದರು.
ಶಾಸಕರ ಐಸೊಲೇಶನ್
ಕೆ. ರಘುಪತಿ ಭಟ್ ಅವರು ಕೊರೊನಾ ಸೋಂಕಿನ ಕಾರಣ ಐಸೊಲೇಶನ್‌ನಲ್ಲಿರುವುದರಿಂದ ಮನೆಯಲ್ಲಿದ್ದು ಮುಖ್ಯಮಂತ್ರಿ, ಸಚಿವರು, ಹಿರಿಯ ಅಧಿಕಾರಿಗಳನ್ನು ಪ್ರಶಂಸಿಸಿದ್ದಾರೆ.