Advertisement

ಉಡುಪಿ ಜಿಲ್ಲೆ: ಉತ್ತಮ ಮಳೆ; ಬೈಂದೂರು ಭಾಗದಲ್ಲಿ ಮನೆಗಳಿಗೆ ಹಾನಿ

12:07 AM Jun 12, 2020 | Sriram |

ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಉತ್ತಮ ಮಳೆ ಸುರಿದ ಪರಿಣಾಮ ಬೈಂದೂರು ತಾಲೂಕಿನ ಅದಮಕ್ಕಿ ನಿವಾಸಿ ಅಪ್ಪಯ್ಯ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಅಂದಾಜು 30 ಸಾವಿರ ರೂ. ನಷ್ಟ ಉಂಟಾಗಿದೆ.

Advertisement

ಇದೇ ತಾಲೂಕಿನ ನೀಲಾ ಫೆರ್ನಾಂಡಿಸ್‌ ಅವರ ಮನೆಗೂ ಗಾಳಿ ಮಳೆಯಿಂದ ಹಾನಿಯಾಗಿ ಅಂದಾಜು 30 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ. ನಾವುಂದದಲ್ಲಿ ಸೂರ ಪೂಜಾರಿಯವರ ಮನೆಯ ಬಾವಿ ಕುಸಿದು ಹಾನಿಯಾಗಿದೆ. ನಗರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮಳೆಯಾಗಿದೆ.

ಜೂ.12ರಿಂದ 15ರ ವರೆ‌ಗೆ ಕರಾವಳಿ ಭಾಗದಲ್ಲಿ ಭಾರೀ ಗಾಳಿ-ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿತ್ತು.

ಉಡುಪಿ ನಗರ, ಮಣಿಪಾಲ, ಉದ್ಯಾವರ. ಮಲ್ಪೆ, ಪರ್ಕಳ, ದೊಡ್ಡಣಗುಡ್ಡೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ.

ಹೆದ್ದಾರಿ ಹಾಗೂ ಇನ್ನಿತರ ಕಡೆಗಳಲ್ಲಿ ಚರಂಡಿಯಲ್ಲಿ ಮಳೆ ನೀರು ಹರಿಯದೆ ರಸ್ತೆಯಲ್ಲೇ ಕೆಸರು ಮಿಶ್ರಿತ ನೀರು ಹರಿಯಿತು. ಬುಧವಾರ ತಡರಾತ್ರಿ ಕೂಡ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿತ್ತು. ಕಾರ್ಕಳ, ಹೆಬ್ರಿ, ಕಾಪು ತಾಲೂಕುಗಳ ವಿವಿಧ ಭಾಗಗಳಲ್ಲಿ ಕೂಡ ಉತ್ತಮ ಮಳೆಯಾದ
ಬಗ್ಗೆ ವರದಿಯಾಗಿದೆ.

Advertisement

ಉಡುಪಿ 86.6 ಮಿ.ಮೀ., ಕುಂದಾಪುರ 107.4 ಮಿ.ಮೀ., ಕಾರ್ಕಳ 79.5 ಮಿ.ಮೀ.ಗಳಷ್ಟು ಮಳೆಯಾಗಿದ್ದು. ಗುರುವಾರ ಬೆಳಗ್ಗೆ 8ರ ವರೆಗಿನ ಅದರ ಹಿಂದಿನ 24 ತಾಸುಗಳಲ್ಲಿ ಜಿಲ್ಲೆಯ ಸರಾಸರಿ ಮಳೆ ಪ್ರಮಾಣ 93.60 ಮಿ. ಮೀ. ದಾಖಲಾಗಿದೆ.

ಕುಂದಾಪುರ ನಗರ, ತೆಕ್ಕಟ್ಟೆ , ಕೋಟೇಶ್ವರ ಬೀಜಾಡಿ, ಗೋಪಾಡಿ, ವಕ್ವಾಡಿ ಪರಿಸರ, ಬಸೂÅರು, ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ , ಮಡಾಮಕ್ಕಿ , ಹೆಂಗವಳ್ಳಿ , ಅಮಾಸೆಬೈಲು, ಉಳ್ಳೂರು-74 ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಮುದ್ರಾಡಿ: ಕುಸಿದ ಪುರಾತನ ಕೆರೆ , ಲಕ್ಷಾಂತರ ರೂ. ನಷ್ಟ
ಹೆಬ್ರಿ: ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬರಬೆಟ್ಟು ಕೃಷಿ ನೀರಾವರಿಗೆ ನಿರ್ಮಿಸಿದ ಸುಮಾರು 25 ವರ್ಷಗಳ ಹಿಂದಿನ ಬೃಹತ್‌ ಕೆರೆಯೊಂದು ಮಳೆಗೆ ಕುಸಿದಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

120 ಅಡಿ ವಿಸ್ತಾರವಾದ ಬೃಹತ್‌ ಕೆರೆ 40 ಅಡಿ ಆಳವಿದ್ದು ಅಡಿಕೆ, ತೆಂಗು ಮೊದಲಾದ ಕೃಷಿ ಚಟು ವಟಿಕೆಗಳಿಗೆ ಈ ನೀರು ಆಶ್ರಯವಾಗಿತ್ತು. ಕೆರೆಯ ಅರ್ಧ ಭಾಗ ಸಂಪೂರ್ಣ ಕುಸಿದಿದ್ದು ದುರಸ್ತಿಗೆ ಸುಮಾರು 40 ಲಕ್ಷ ರೂ. ಖರ್ಚು ತಗಲಬಹುದು ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಇಂತಹ ಬೃಹತ್‌ ಕೆರೆ ವಿರಳವಾಗಿದ್ದು ನೂತನವಾಗಿ ಇಂತಹ ಕೆರೆ ನಿರ್ಮಾಣ ಮಾಡಲು ಸುಮಾರು 1 ಕೋ.ರೂ. ತಗಲಬಹುದು.

ಕೃಷಿಗೆ ತೊಂದರೆ
ಈ ಭಾಗದಲ್ಲಿ ಇಂತಹ ಕೆರೆಗಳು ಕಾಣ ಸಿಗುವುದು ವಿರಳ. 25 ವರ್ಷಗಳ ಹಿಂದೆ ನಿರ್ಮಾಣ ಮಾಡುವಾಗ ಸುಮಾರು 500 ಲೋಡ್‌ ಕಲ್ಲುಗಳನ್ನು ಬಳಸಲಾಗಿತ್ತು. ಸಂಪೂರ್ಣ ಕೃಷಿ ಚಟುವಟಿಕೆಗಳಿಗೆ ಈ ನೀರನ್ನೇ ನಂಬಿದ್ದು ಇದರ ದುರಸ್ತಿಯಾಗದಿದ್ದಲ್ಲಿ ಕೃಷಿಗೆ ತೊಂದರೆಯಾಗಲಿದೆ..
-ಸುಧಾಕರ ಶೆಟ್ಟಿ , ಕೃಷಿಕರು,
ಬರ್ಬೆಟ್ಟು ಮುದ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next