Advertisement

ಉಡುಪಿ ಜಿಲ್ಲೆ: 6 ಮಂಗಗಳ ಸಾವು

01:00 AM Feb 06, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 6 ಮಂಗಗಳು ಸಾವನ್ನಪ್ಪಿವೆ. ಈ ಪೈಕಿ ಬಿದ್ಕಲ್‌ಕಟ್ಟೆ ಸಮೀಪದ ಮಂಡಳ್ಳಿ ಮತ್ತು ವಂಡ್ಸೆ ಮೂರ್ತುವಿನಲ್ಲಿ ಪತ್ತೆಯಾದ ಎರಡು ಮಂಗಗಳ ಮೃತದೇಹಗಳನ್ನು ಶವ ಪರೀಕ್ಷೆಗೆ ರವಾನಿಸಲಾಗಿದೆ. ಜ.19ರಿಂದ ಫೆ.2ರ ವರೆಗೆ 46 ಮೃತ ಮಂಗಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 12 ಮಂಗಗಳಿಗೆ ರೋಗ ತಗಲಿರುವುದು ಪತ್ತೆಯಾಗಿದೆ. 

Advertisement

ಮಣಿಪಾಲದ ಎಂಸಿವಿಆರ್‌ ತಂಡವು ಶಿರೂರು, ಗೋಳಿಹೊಳೆ ಮತ್ತು ಕೆರಾಡಿ ಪ್ರದೇಶಗಳಲ್ಲಿ ಕಣ್ಗಾವಲು ಇರಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಮನುಷ್ಯರಿಗೆ ಮಂಗನಕಾಯಿಲೆ ತಗಲಿರು ವುದು ಪತ್ತೆಯಾಗಿಲ್ಲ. 

ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಫೆ. 5ರಂದು ಯಾವುದೇ ರೋಗಿಗಳು ದಾಖಲಾಗಿಲ್ಲ. ದಾಖಲಾಗಿದ್ದ ಫ್ರೆಂಚ್‌ ಮಹಿಳೆ ಸಹಿತ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಮಣಿಪಾಲ ಆಸ್ಪತ್ರೆ ಮೂಲಗಳು ತಿಳಿಸಿವೆ. ಅಲೆವೂರಿನಲ್ಲಿ ಪತ್ತೆಯಾದ ಮಂಗನ ಶವ ಪರೀಕ್ಷೆ ಫ‌ಲಿತಾಂಶ ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next