Advertisement

ಮಟ್ಟು : ಕಟಾವಿಗೆ ಸಿದ್ಧಗೊಂಡ ಮಟ್ಟುಗುಳ್ಳ ಗದ್ದೆಗಳು ಜಲಾವೃತ

09:18 PM Oct 13, 2021 | Team Udayavani |

ಕಟಪಾಡಿ: ಮಂಗಳವಾರದಂದು ಸುರಿದ ಭಾರೀ ಮಳೆ, ಬೀಸಿದ ಗಾಳಿಯ ಪರಿಣಾಮ ಮಟ್ಟುಗುಳ್ಳದ ಬೆಳೆಯುಳ್ಳ ಗದ್ದೆಗೆ ನೀರು ನುಗ್ಗಿದ್ದು ಬೆಳೆಹಾನಿ ಸಂಭವಿಸಿದೆ.

Advertisement

ಇದೀಗ ಫಸಲು ಕೊಯಿಲಿಗೆ ಸಿದ್ಧಗೊಂಡಿದ್ದು, ನಿರಂತರ ಫಸಲು ನೀಡುವ ಗಿಡಗಳನ್ನು ಹೊಂದಿರುವ ಗದ್ದೆಯು ಸಂಪೂರ್ಣ ಜಲಾವ್ರತವಾಗಿ ನೀರಿನಲ್ಲಿ ಮುಳುಗುವಂತಾಗಿದೆ. ಕೆಲವೆಡೆ ನಾಟಿಗೆ ಸಿದ್ಧಪಡಿಸಿದ ಗದ್ದೆಗಳಲ್ಲೂ ನೀರು ತುಂಬಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಕೆಲವೆಡೆ ನಾಟಿ ನಡೆಸಿದ ಗದ್ದೆಗಳು ಜಲಾವ್ರತಗೊಂಡಿದೆ.

ಸುಮಾರು ನೂರು ಎಕರೆಗೂ ಮಿಕ್ಕಿದ ಪ್ರದೇಶದಲ್ಲಿ ಕಳೆದ ಮೂರು ತಿಂಗಳ ನಿರಂತರ ಶ್ರಮದ ಫಲವಾಗಿ ಮಟ್ಟುಗುಳ್ಳ ಪ್ರಿಯರಿಗೆ ನವರಾತ್ರಿಯ ಸಡಗರಕ್ಕೆ ಮಟ್ಟುಗುಳ್ಳದ ರುಚಿಯನ್ನು ಸವಿಯುವಂತೆ ಮಾಡಿದ ಮಟ್ಟುಗುಳ್ಳ ಬೆಳೆಗಾರರು ಇದೀಗ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ.

ಇದನ್ನೂ ಓದಿ:ಅ.20ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಸಚಿವ  ಬಿ. ಶ್ರೀರಾಮುಲು

ಫ‌ಸಲು ಹಾನಿ
ಮತ್ತೆ ಗಿಡ ನಾಟಿ ಮಾಡಿ ಬೆಳೆ ತೆಗೆಯಬೇಕಾದ ಅನಿವಾರ್ಯತೆ ಇದೆ. ಕಟಾವಿಗೆ ನಿಂತ ಮಟ್ಟುಗುಳ್ಳದ ಫಸಲು ನಾಶಗೊಂಡಿದ್ದು ಅಪಾರ ನಷ್ಟ ಸಂಭವಿಸಿದೆ.
-ಸುನಿಲ್‌ ಡಿ. ಬಂಗೇರ, ಅಧ್ಯಕ್ಷರು, ಮಟ್ಟುಗುಳ್ಳ ಬೆಳೆಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next