ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ:ನಾವು ಹೊಡೆದಾಟಕ್ಕೆ ರೆಡಿ ಇದ್ದೀವಿ.. ಅಂದ್ರೆ ನೀವು ಏನು ಸಂದೇಶ ಕೊಡ್ತೀರಾ ಈಶ್ವರಪ್ಪನವರೇ..?
ಮೂಲಗಳ ಪ್ರಕಾರ, ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಮುಖ್ಯಮಂತ್ರಿ ಕಚೇರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಜಗದೀಶ್ ಅವರು 2019ರ ಆಗಸ್ಟ್ ನಲ್ಲಿ ಉಡುಪಿಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಇದೇ ಸೆಪ್ಟೆಂಬರ್ ನಲ್ಲಿ ಜಿ.ಜಗದೀಶ್ ಅವರು ಉಡುಪಿ ಜಿಲ್ಲಾಧಿಕಾರಿಯಾಗಿ ಎರಡು ವರ್ಷ ಪೂರೈಸಲಿದ್ದಾರೆ. ಏತನ್ಮಧ್ಯೆ ಜಿ.ಜಗದೀಶ್ ಅವರ ವರ್ಗಾವಣೆ ಕುರಿತ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಾಗಿದೆ.
ಕಡೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎರಡು ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಜಗದೀಶ್ ಅವರು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2006-07ರಲ್ಲಿ ಉಡುಪಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್, ಹೇಮಲತಾ ಅವರ ಸೇವಾವಧಿಯಲ್ಲಿ ಪ್ರೊಬೆಶನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಐಎಎಸ್ ಶ್ರೇಣಿಗೆ ಭಡ್ತಿಗೊಂಡ ಬಳಿಕ ಜಗದೀಶ್ ಅವರು ಹಾಸನ ಜಿ.ಪಂ. ಸಿಇಒ, ಕೋಲಾರ ಜಿ.ಪಂ. ಸಿಇಒ, ಆದ ನಂತರ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದರು.