Advertisement
ಉಡುಪಿ ತಾಲೂಕುಉಡುಪಿ ನಗರದಲ್ಲಿ ಬಂದ್‌ಗೆ ಪರ – ವಿರೋಧ ಬಹಿರಂಗವಾಗಿ ವ್ಯಕ್ತವಾಯಿತು. ಬಹುತೇಕ ಅಂಗಡಿ, ಹೊಟೇಲ್‌ಗಳು ಬಂದ್ ಆಗಿದ್ದವು. ಬಸ್ ಸಂಚಾರ ವಿರದ ಕಾರಣ ಜನಸಂಚಾರ ವಿರಳವಿತ್ತು. ಆಟೋ ರಿಕ್ಷಾಗಳು ಕೆಲವೆಡೆ ಬಂದ್ ಆಚರಿಸಲಿಲ್ಲ. ಬಂದ್ ಘರ್ಷಣೆ ವೇಳೆ ಕಾರ್ಯಕರ್ತರು ಗಾಯಗೊಂಡದ್ದು, ಎಸ್‌ಪಿ ಕಚೇರಿ ಎದುರು ಎಸ್‌ಪಿಯವರೇ ಸ್ವತಃ ಲಾಠಿ ಬೀಸಬೇಕಾಗಿ ಬಂದದ್ದು ಸೋಮವಾರದ ಕಪ್ಪುಚುಕ್ಕೆ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಕುಂದಾಪುರ ನಗರದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಆದರೆ ತಾಲೂಕಿನ ಇತರೆಡೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ರಿಕ್ಷಾ ಓಡಾಟ ಸೀಮಿತವಾಗಿತ್ತು. ಜನರ ಓಡಾಟ ವಿರಳ ವಾಗಿತ್ತು. ಕಾಂಗ್ರೆಸ್‌ನವರು ಬಂದ್ ಮಾಡಿಸುವಾಗ, ಬಿಜೆಪಿಯವರು ಅಂಗಡಿ ಪುನಃ ತೆರೆಸುವಾಗ ಪೊಲೀಸರ ಜತೆ ಮಾತಿನ ಚಕಮಕಿ ನಡೆದುದು ಬಿಟ್ಟರೆ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಎರಡೂ ಪಕ್ಷದವರು ರೋಡ್‌ಶೋ ನಡೆಸಿದರು. ಸಿಪಿಐಎಂ ಕೂಡ ಪ್ರತಿಭಟನೆ ನಡೆಸಿತು. ಕಾರ್ಕಳ
ಕಾರ್ಕಳ: ತಾಲೂಕಿನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಕೆಲವಷ್ಟೇ ಅಂಗಡಿಗಳು ಬಂದ್ ಆಗಿದ್ದು ಹೊರತುಪಡಿಸಿದರೆ ಎಂದಿನಂತೆ ಅಂಗಡಿಗಳು ತೆರೆದಿದ್ದವು. ಬೆಳ್ಮಣ್‌ನಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು. ಬಜಗೋಳಿ, ಅಜೆಕಾರು ಭಾಗದಲ್ಲಿ ಕೆಲವಷ್ಟೇ ಅಂಗಡಿಗಳನ್ನು ಮುಚ್ಚಲಾಗಿತ್ತು. ಜನಸಂಖ್ಯೆ ವಿರಳವಾಗಿತ್ತು. ಬಸ್ ನಿಲ್ದಾಣದಲ್ಲಿ ಬಿಕೋ ಅನ್ನುತ್ತಿತ್ತು. ತಾಲೂಕು ಕಚೇರಿ ಸಮೀಪ ಕಾಂಗ್ರೆಸಿಗರು ಪ್ರತಿಭಟಿಸಿ ಧಿಕ್ಕಾರ ಕೂಗಿದರು.
Related Articles
ಕಾಪು: ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪೊಲಿಪು ಜಂಕ್ಷನ್‌ನಲ್ಲಿ ವಿನಯ ಕುಮಾರ ಸೊರಕೆ ನೇತೃತ್ವದಲ್ಲಿ ಕಾರ್ಯ ಕರ್ತರು ರಾ.ಹೆ. ತಡೆದು ಪ್ರತಿಭಟಿಸಿದರು.
Advertisement
ಬ್ರಹ್ಮಾವರ, ಹೆಬ್ರಿಬ್ರಹ್ಮಾವರ: ಬ್ರಹ್ಮಾವರದ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಂದ್ ಶಾಂತಿಯುತವಾಗಿತ್ತು. ಹೆಬ್ರಿ ಯಲ್ಲಿ ಬಂದ್ ಆಂಶಿಕವಾಗಿತ್ತು. ಕೆಲವು ಅಂಗಡಿ, ಹೊಟೇಲ್‌ಗಳು ಬಂದ್ ಆಗಿದ್ದವು. ಪತ್ರಿಕೆಗೂ ರಿಯಾಯಿತಿ ನೀಡಿಲ್ಲ
ಮಂಗಳೂರು/ಉಡುಪಿ: ಸಾಮಾನ್ಯವಾಗಿ ಬಂದ್ ಸಂದರ್ಭ ಪತ್ರಿಕೆಗಳ ಮಾರಾಟಕ್ಕೆ ಅಡ್ಡಿ ಮಾಡುವುದಿಲ್ಲ. ಆದರೆ ಸೋಮವಾರ ಭಾರತ ಬಂದ್ ವೇಳೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಲವೆಡೆ ಪತ್ರಿಕೆ ಅಂಗಡಿಗಳನ್ನು ಕೂಡ ಬಂದ್ ಮಾಡಿಸಲಾಯಿತು. ಒಮ್ಮೆ ತೆರೆದ ಅಂಗಡಿಗಳನ್ನು ಮುಚ್ಚಿಸಲಾಯಿತು. ಮತ್ತೆ ಕೆಲವರು ಅಂಗಡಿ ತೆರೆದು ಪತ್ರಿಕೆ ಮಾರಾಟ ಮಾಡಲು ಮುಂದಾ ದರು. ಆದರೆ ಮತ್ತೂಮ್ಮೆ ಬಂದ್ ಮಾಡಿಸ ಲಾ ಯಿತು. ಅಂತಿಮವಾಗಿ ಸಂಜೆ ವೇಳೆ ಕೆಲವರು ಪತ್ರಿಕೆ ಮಾರಾಟ ಮಾಡಬೇಕಾಯಿತು. ಬಂದ್ ವೇಳೆ ದೌರ್ಜನ್ಯ: ಮಹಿಳೆ ದೂರು
ಉಡುಪಿ: “ಕಡಿಯಾಳಿಯ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಬಲವಂತವಾಗಿ ಬಂದ್ ಮಾಡಲು ಬಂದ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಚೈತ್ರಾ ಕುಂದಾಪುರ ಅವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಬೆಳಗ್ಗೆ 9ಕ್ಕೆ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರಾದ ರಮೇಶ್ ಕಾಂಚನ್, ಶೇಖರ್ ಜಿ.ಕೋಟ್ಯಾನ್, ಜನಾರ್ದನ ಭಂಡಾರ್‌ಕರ್, ಜ್ಯೋತಿ ಹೆಬ್ಟಾರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ, ಪ್ರಶಾಂತ್ ಪೂಜಾರಿ ಮತ್ತು ಇತರರು ಹೊಟೇಲ್‌ಗೆ ಬಂದರು. ನಾನು ಮೋದಿಗೆ ಜೈಕಾರ ಹಾಕಿದಾಗ ಯತೀಶ್ ಕರ್ಕೆರ ನನ್ನ ಕೈ ಹಿಡಿದು ಎಳೆದರು. ಜ್ಯೋತಿ ಹೆಬ್ಟಾರ್ ಅಸಭ್ಯವಾಗಿ ಹೇಳಿ ನಿಂದಿಸಿದ್ದಾರೆ. ಇತರರು ತಳ್ಳಿ ಮುಂದಕ್ಕೆ ನೋಡಿ ಕೊಳ್ಳುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ. ಬಲವಂತದ ಬಂದ್: ದೂರು
“ಸೋಮವಾರ ಬೆಳಗ್ಗೆ 8.30ಕ್ಕೆ ಅಂಗಡಿ ಬಾಗಿಲು ತೆರೆದು ವ್ಯವಹಾರ ಮಾಡುತ್ತಿದ್ದಾಗ 9.15ರ ವೇಳೆಗೆ ಬಂದ ರಮೇಶ್ ಕಾಂಚನ್ ಮತ್ತು ಇತರ 25ರಿಂದ 30 ಮಂದಿ ಅಂಗಡಿಯ ಶಟರ್‌ನ್ನು ಬಲಾತ್ಕಾರದಿಂದ ಅರ್ಧಕ್ಕೆ ಮುಚ್ಚಿ ಅಂಗಡಿ ಮುಚ್ಚಬೇಕು ಎಂದು ಹೇಳಿ ವ್ಯಾಪಾರ ಮಾಡದಂತೆ ತಡೆಯೊಡ್ಡಿದರು’ ಎಂದು ಕಲ್ಸಂಕ ಜಂಕ್ಷನ್ ಬಳಿ ಇರುವ ಪೈಂಟ್ ಹೌಸ್ ಅಂಗಡಿ ಮಾಲಕ ಜಯಾನಂದ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.