ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಆರು ಮಂದಿ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರಲ್ಲಿ ಇಬ್ಬರು ಪುರುಷರು ತೀವ್ರ ಉಸಿರಾಟದ ಸಮಸ್ಯೆ ಇರುವವರು ಮತ್ತು ನಾಲ್ವರು ಪುರುಷರು ಕೋವಿಡ್ 19 ಶಂಕಿತರಾಗಿದ್ದಾರೆ.
ಜಿಲ್ಲೆಯ ಐಸೊಲೇಶನ್ ವಾರ್ಡ್ ಗಳಲ್ಲಿ ಒಟ್ಟು 25 ಮಂದಿ ಇದ್ದಾರೆ. ಮಂಗಳವಾರ ನಾಲ್ವರು ವಾರ್ಡ್ ನಿಂದ ಬಿಡುಗಡೆಗೊಂಡಿದ್ದರೆ, ಇದುವರೆಗೆ ಒಟ್ಟು 145 ಮಂದಿ ಬಿಡುಗಡೆಗೊಂಡಿದ್ದಾರೆ.
ಮಂಗಳವಾರ 34 ಮಂದಿ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ ಒಟ್ಟು ನೋಂದಣಿ ಮಾಡಿಕೊಂಡವರು 2,030 ಮಂದಿ. ಅವರಲ್ಲಿ ಮಂಗಳವಾರ 28 ದಿನಗಳ ನಿಗಾ ಪೂರೈಸಿದವರು 87 ಮಂದಿ ಮತ್ತು ಇದುವರೆಗೆ ಒಟ್ಟು 490 ಜನರು ಪೂರೈಸಿದ್ದಾರೆ. ಮಂಗಳವಾರ 213 ಮಂದಿ 14 ದಿನಗಳ ನಿಗಾ ಪೂರೈಸಿದ್ದು, ಇದುವರೆಗೆ 1,793 ಮಂದಿ ನಿಗಾ ಅವಧಿ ಮುಗಿಸಿದ್ದಾರೆ.
ಹೋಂ ಕ್ವಾರಂಟೈನ್‌ನಲ್ಲಿರುವವರು 149 ಮಂದಿ, ಮಂಗಳವಾರ ಆಸ್ಪತ್ರೆ ಕ್ವಾರಂಟೈನ್‌ಗೆ ದಾಖಲಾದವರು 6 ಮಂದಿ. ಈಗ ಒಟ್ಟು 67 ಮಂದಿ ಆಸ್ಪತ್ರೆ ಕ್ವಾರಂಟೈನ್‌ಗೆ ದಾಖಲಾಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ ಮಂಗಳವಾರ ಇಬ್ಬರು ಬಿಡುಗಡೆಗೊಂಡಿದ್ದಾರೆ.
ಮಂಗಳವಾರ ತೀವ್ರ ಉಸಿರಾಟದ ಸಮಸ್ಯೆ ಇರುವ ಇಬ್ಬರು, ಕೋವಿಡ್ 19 ಶಂಕಿತ ಆರು, ಕೋವಿಡ್ 19 ಸಂಪರ್ಕದ 11 ಮಂದಿ ಒಟ್ಟು 19 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಇದುವರೆಗೆ 288 ಜನರ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ 224 ಜನರ ವರದಿಗಳು ಬಂದಿದ್ದು 221 ಜನರ ವರದಿ ನೆಗೆಟಿವ್ ಮತ್ತು ಮೂವರ ವರದಿ ಪಾಸಿಟಿವ್ ಆಗಿವೆ. 64 ಮಂದಿಯ ವರದಿ ಬರಬೇಕಾಗಿದೆ.