Advertisement
ಜಿಲ್ಲೆಯ ಐಸೊಲೇಶನ್ ವಾರ್ಡ್‌ನಲ್ಲಿ 16 ಮಂದಿ ಇದ್ದಾರೆ. ಬುಧವಾರ ಆರು ಮಂದಿ ವಾರ್ಡ್‌ನಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ 151 ಮಂದಿ ಮಂದಿ ಬಿಡುಗಡೆಗೊಂಡಿದ್ದಾರೆ.
ಬುಧವಾರ ತೀವ್ರ ಉಸಿರಾಟದ ಸಮಸ್ಯೆ ಇರುವ ಒಬ್ಬರು, ಕೋವಿಡ್ 19 ಶಂಕಿತ ಇಬ್ಬರು ಸಹಿತ ಒಟ್ಟು 3 ಮಂದಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೊದಲ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ಕಂಡುಬಂದ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಎ. 6ರಂದು ಕಳುಹಿಸಿದ ಆತನ ಗಂಟಲ ದ್ರವದ ಮಾದರಿಯ ಫಲಿತಾಂಶ ಬುಧವಾರ ತಲುಪಿದ್ದು ಮೊದಲ ವರದಿ ಬಂದಿದ್ದು ನೆಗೆಟಿವ್ ಆಗಿದೆ. ಬುಧವಾರ ಮತ್ತೆ ಮಾದರಿಯನ್ನು ಕಳುಹಿಸಲಾಗಿದ್ದು ಗುರುವಾರ ಬರುವ ಸಾಧ್ಯತೆಗಳಿವೆ. ಎರಡನೇ ವರದಿಯೂ ನೆಗೆಟಿವ್ ಕಂಡುಬಂದರೆ 14 ದಿನಗಳ ಅನಂತರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.