Advertisement
ಎ. 17, 18ರಂದು ಉಡುಪಿಯ ಜಿಲ್ಲಾಸ್ಪತ್ರೆ, ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ, ಕುಂದಾಪುರ ಮತ್ತು ಕಾರ್ಕಳದ ತಾಲೂಕು ಆಸ್ಪತ್ರೆಗಳಲ್ಲಿ ಭಾರತೀಯ ವೈದ್ಯರ ಸಂಘ ಕರಾವಳಿ ಶಾಖೆ ಉಡುಪಿ, ರೋಟರಿ ಕ್ಲಬ್, ರೆಡ್‌ಕ್ರಾಸ್ ಸೊಸೈಟಿ ಸಹಕಾರದಲ್ಲಿ ವಿಸ್ಕ್ ಸ್ಥಾಪಿಸಲಾಗಿದೆ. ಇದು ಗಂಟಲ ದ್ರವ ಸಂಗ್ರಹ ಮಾಡುವಾಗ ರೋಗಿಗೂ ವೈದ್ಯಕೀಯ ಸಿಬಂದಿಗೂ ತಡೆಗೋಡೆಯಾಗಿದ್ದು ಸುರಕ್ಷಿತ ಮಾರ್ಗವಾಗಿದೆ ಮತ್ತು ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್ (ಪಿಪಿಇ) ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ಕೋವಿಡ್ 19 ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್ ತಿಳಿಸಿದ್ದಾರೆ.
ರವಿವಾರ ಒಟ್ಟು 26 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಉಸಿರಾಟದ ಸಮಸ್ಯೆಯ ನಾಲ್ವರು, ಕೋವಿಡ್ 19 ಸಂಪರ್ಕದ 11 ಮಂದಿ, ಜ್ವರದ ಆರು, ಹಾಟ್‌ಸ್ಪಾಟ್ ಸಂಪರ್ಕದ ಐವರು ಇದ್ದಾರೆ. ಇದುವರೆಗೆ 894 ಮಾದರಿಗಳನ್ನು ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದೆ.
Related Articles
ರವಿವಾರ ಬಂದ ಎಲ್ಲ 118 ವರದಿಗಳೂ ನೆಗೆಟಿವ್ ಆಗಿದ್ದು ಇದುವರೆಗೆ 796 ವರದಿಗಳು ನೆಗೆಟಿವ್ ಆಗಿವೆ. 95 ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.
Advertisement
57 ಮಂದಿ ಐಸೊಲೇಶನ್ ವಾರ್ಡ್ನಲ್ಲಿರವಿವಾರ ತೀವ್ರ ಉಸಿರಾಟ ಸಮಸ್ಯೆಯ ಮೂವರು ಪುರುಷರು, ಕೋವಿಡ್ 19 ಶಂಕೆ, ಜ್ವರದ ತಲಾ ಒಬ್ಬರು ಒಟ್ಟು ಐವರು ಆಸ್ಪತ್ರೆಗಳ ಐಸೊಲೇಶನ್ ವಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ 57 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ರವಿವಾರ ನಾಲ್ವರು ಬಿಡುಗಡೆಗೊಂಡಿದ್ದಾರೆ. 109 ಮಂದಿ ನೋಂದಣಿ
ರವಿವಾರ ಒಟ್ಟು 109 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ರವಿವಾರ 63 ಮಂದಿ 28 ದಿನಗಳ, 25 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇದುವರೆಗೆ 1,825 ಮಂದಿ 28 ದಿನಗಳ, 2,162 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಪ್ರಸ್ತುತ 572 ಮಂದಿ ಮನೆಗಳಲ್ಲಿ ಮತ್ತು 35 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ.