Advertisement
ಸಂಜೆ ಅನಂತರ ತೆಕ್ಕಟ್ಟೆ, ಕೊಲ್ಲೂರು, ಕೋಟೇಶ್ವರ, ಬ್ರಹ್ಮಾವರ, ಕುಂದಾಪುರ, ಬೈಂದೂರು ಸೇರಿದಂತೆ ವಿವಿಧ ಕಡೆಯಲ್ಲಿ ಭಾರೀ ಗಾಳಿ ಮಳೆಯಾಗಿದೆ.ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮೆಸ್ಕಾಂಗೆ ಒಟ್ಟು 17.93 ಲ.ರೂ. ನಷ್ಟ ಉಂಟಾಗಿದೆ.
ಅಜೆಕಾರು: ಬುಧವಾರ ಸಂಜೆ ಭಾರೀ ಗಾಳಿಗೆ ಮುಟ್ಲುಪಾಡಿ ಪರಿಸರದ ಬಹುತೇಕ ಅಂಗಡಿ ಮತ್ತು ಮನೆಗಳು ಹಾನಿಗೀಡಾಗಿವೆ. 20 ಮನೆಗಳ ಮೇಲ್ಛಾವಣಿಗೆೆ ಸಂಪೂರ್ಣ ಹಾನಿಯಾಗಿದ್ದು, 100ಕ್ಕೂ ಅಧಿಕ ಮನೆಗಳ ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ. ರಸ್ತೆ, ಮನೆಗಳ ಮೇಲೆ 100ಕ್ಕೂ ಅಧಿಕ ಮರಗಳು ಉರುಳಿವೆ. 25 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಸಂತ್ರಸ್ತ ರಿಗೆ ಮುಟ್ಲುಪಾಡಿ ಸರಕಾರಿ ಶಾಲೆ ಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ಕುಂದಾಪುರ: ಮನೆ ಹಾನಿ
ಕುಂದಾಪುರ: ತಾಲೂಕಿನೆಲ್ಲೆಡೆ ಬುಧವಾರ ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಿತ್ತು. ಮಂಗಳವಾರ ರಾತ್ರಿ ಸುರಿದ ಮಳೆಗೆ ಹಲವೆಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.