Advertisement

Udupi ಧರ್ಮಪ್ರಾಂತ: ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

11:33 PM Nov 26, 2023 | Team Udayavani |

ಉಡುಪಿ: ಉಡುಪಿ ಕೆಥೋಲಿಕ್‌ ಧರ್ಮಪ್ರಾಂತದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ರವಿವಾರ ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಜರಗಿತು. ಪರಮಪ್ರಸಾದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಪ್ರಧಾನ ಬಲಿಪೂಜೆ ನೇತೃತ್ವವನ್ನು ವಹಿಸಿದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ರೈ| ರೆ| ಜೆರಾಲ್ಡ್ ಐಸಾಕ್‌ ಲೋಬೊ ಸಂದೇಶ ನೀಡಿದರು.

Advertisement

ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿಯ ಸೇವೆ ಕ್ರೈಸ್ತ ಧರ್ಮದ ಮೂಲ ತತ್ವವಾಗಿದೆ. ಯೇಸು ಸ್ವಾಮಿ ಶಿಲುಬೆಗೇರಿ ನಮ್ಮೆಲ್ಲರ ಪಾಪಗಳನ್ನು ಕ್ಷಮಿಸಿ ಮನುಕುಲಕ್ಕೆ ಮಾದರಿಯಾದರು. ಅದರಂತೆ ನಾವು ಜೀವನದಲ್ಲಿ ಕ್ಷಮೆ, ಪ್ರೀತಿ, ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡುವಂತಾಗುವಂತೆ ಡಾ| ಜೆರಾಲ್ಡ್ ಐಸಾಕ್‌ ಕರೆ ನೀಡಿದರು.

ಪವಿತ್ರ ಬಲಿಪೂಜೆ ಬಳಿಕ ಧರ್ಮಗುರು ವಂ| ಸಿರಿಲ್‌ ಲೋಬೊ ಪರಮಪ್ರಸಾದ ಆರಾಧನೆ ನೆರವೇರಿಸಿದರು. ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್‌ ರೋಸರಿ ಚರ್ಚ್‌ನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಲಾಯಿತು.

ಉದ್ಯಾವರ ಸಂತ ಫ್ರಾನ್ಸಿಸ್‌ ಝೇವಿಯರ್‌ ಚರ್ಚ್‌ನ ಸಹಾಯಕ ಧರ್ಮಗುರು ವಂ| ಲಿಯೊ ಪ್ರವೀಣ್‌ ಡಿ’ಸೋಜಾ ಬೈಬಲ್‌ ವಾಚನ ಮಾಡಿದರು. ಧರ್ಮಪ್ರಾಂತ ವ್ಯಾಪ್ತಿಯ 51 ಚರ್ಚ್‌ಗಳಿಂದ 3 ಸಾವಿರಕ್ಕೂ ಅಧಿಕ ಮಂದಿ ಭಕ್ತರು, 50ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ ಮಟ್ಟದ ಕ್ರಿಸ್ತ ಜಯಂತಿ ಆಚರಣೆ -2025ನೇ ವರ್ಷದ ಸಿದ್ಧತೆಗೆ ಲೋಗೊ ಅನಾವರಣಗೊಳಿಸುವ ಮೂಲಕ ಧರ್ಮಾಧ್ಯಕ್ಷರು ಚಾಲನೆ ನೀಡಿದರು.

ಧರ್ಮಪ್ರಾಂತದ ವಿಕಾರ್‌ ಜನರಲ್‌ ಮೊನ್ಸಿಂಜೊರ್‌ ಫ‌ರ್ಡಿನಾಂಡ್‌ ಗೊನ್ಸಾಲ್ವಿಸ್‌, ಕುಲಪತಿ ಡಾ| ರೋಶನ್‌ ಡಿ’ಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ಡೆನಿಸ್‌ ಡೆಸಾ, ಕಲ್ಯಾಣಪುರ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೊನ್ಸಾ, ವಂ| ಡಾ| ಲೆಸ್ಲಿ ಡಿಸೋಜಾ, ವಂ| ಪಾವ್ಲ್ ರೇಗೊ, ವಂ| ಚಾರ್ಲ್ಸ್ ಮಿನೇಜಸ್‌, ಮೌಂಟ್‌ ರೋಸರಿ ಚರ್ಚ್‌ನ ಧರ್ಮಗುರು ವಂ| ರೋಕ್‌ ಡೆಸಾ, ಧರ್ಮಪ್ರಾಂತದ ಪಾಲನ ಸಮಿತಿ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.

Advertisement

ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆಗೆ ಸಿದ್ಧತೆ
ಮಂಗಳೂರು/ಉಡುಪಿ: ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ಕ್ರಿಸ್ತ ಜಯಂತಿ ಜುಬಿಲಿ 2025 ಸಂಭ್ರಮಾಚರಣೆಗೆ ಎರಡು ವರ್ಷ ಗಳ ಪೂರ್ವ ಸಿದ್ಧತೆಗಳು ಆರಂಭ ಗೊಂಡಿವೆ. ಮಂಗಳೂರು ಬಿಷಪ್‌ ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ನಗರದ ಹೋಲಿ ರೋಜರಿ ಕೆಥೆಡ್ರಲ್‌ನಲ್ಲಿ ರವಿವಾರ ಚಾಲನೆ ನೀಡಿದರೆ, ಉಡುಪಿ ಬಿಷಪ್‌ ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅವರು ಕಲ್ಯಾಣಪುರದ ಮೌಂಟ್‌ ರೋಸರಿ ಚರ್ಚ್‌ನಲ್ಲಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next