ಉಡುಪಿ: ಉಡುಪಿ ಕ್ರೆ„ಸ್ತ ಧರ್ಮಪ್ರಾಂತದ ಪವಿತ್ರ ಪರಮಪ್ರಸಾದದ ವಾರ್ಷಿಕ ಮೆರವಣಿಗೆಯು ರವಿವಾರ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ನಡೆಯಿತು. ಮೆರವಣಿಗೆಯು ಅಪರಾಹ್ನ 3 ಗಂಟೆಗೆ ಪ್ರಾರಂಭಗೊಂಡು ಸಂತೆಕಟ್ಟೆಯ ಮೌಂಟ್ ರೋಸರಿ ಇಗರ್ಜಿಯಲ್ಲಿ ಸಂಪನ್ನಗೊಂಡಿತು.
ಕ್ರಿಸ್ತರಾಜರ ಮಹೋತ್ಸವದ ಕೃತಜ್ಞತಾ ಬಲಿಪೂಜೆ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ನಡೆಯಿತು. ಧರ್ಮಪ್ರಾಂತದ 51 ಚರ್ಚ್‌ಗಳ ಧರ್ಮ ಗುರುಗಳು, ಇತರ ಗುರುಗಳು ಉಪಸ್ಥಿತರಿದ್ದರು.
ಬಲಿಪೂಜೆಯ ಬಳಿಕ ಪರಮ ಪ್ರಸಾದವನ್ನು ಮಿಲಾಗ್ರಿಸ್ ಕೆಥೆಡ್ರಲ್‌ನಿಂದ ತೆರೆದ ಅಲಂಕೃತ ವಾಹನದಲ್ಲಿ ಮೆರವಣಿಗೆಯ ಮೂಲಕ ಸಂತೆಕಟ್ಟೆಯ ಮೌಂಟ್ ರೋಜರಿ ದೇವಾಲಯದವರೆಗೆ ಹಾಡು, ಕೀರ್ತನೆಗಳ ಮೂಲಕ ಭಕ್ತಿಪೂರ್ವಕವಾಗಿ ಕೊಂಡೊಯ್ದು ಸಾರ್ವಜನಿಕವಾಗಿ ಗೌರವ ಸಲ್ಲಿಸಲಾಯಿತು.
ಪ್ರಧಾನ ವೇದಿಕೆಯಲ್ಲಿ ಪರಮಪ್ರಸಾದವನ್ನಿಟ್ಟು ಧೂಪಾರಾಧನೆ ಮಾಡಿದ ಬಳಿಕ ಉದ್ಯಾವರ ಚರ್ಚ್‌ನ ವಂ| ರೋಕ್ ಡಿ’ಸೋಜಾ ಶುಭಗ್ರಂಥದ ಮೇಲೆ ಪ್ರವಚನ ನೀಡಿದರು. ಸುವಾರ್ತಾ ಪ್ರಸಾರ ರವಿ ವಾರದ ಸಂದರ್ಭ ಧರ್ಮಪ್ರಾಂತದ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕಾಣಿಕೆಯನ್ನು ಸಂಗ್ರಹಿಸಿದ ಚರ್ಚು ಗಳನ್ನು ಧರ್ಮಾಧ್ಯಕ್ಷರು ಗೌರವಿಸಿದರು.
ಧರ್ಮಪ್ರಾಂತದ ವಿಕಾರ್ ಜನರಲ್ ವಂ| ಬ್ಯಾಪ್ಟಿಸ್ಟ್ ಮಿನೇಜಸ್, ವಲಯಗಳ ಪ್ರಧಾನ ಧರ್ಮಗುರುಗಳಾದ ವಂ| ವಲೇರಿಯನ್ ಮೆಂಡೊನ್ಸಾ, ವಂ| ಅನಿಲ್ ಡಿ’ಸೋಜಾ, ವಂ| ಸ್ಟ್ಯಾನಿ ತಾವ್ರೊ, ವಂ| ಜೊಸ್ಸಿ ಫೆರ್ನಾಂಡಿಸ್, ವಂ| ಸ್ಟ್ಯಾನಿ ಬಿ. ಲೋಬೊ, ಮೌಂಟ್ ರೋಸರಿ ಚರ್ಚಿನ ವಂ| ಲೆಸ್ಲಿ ಡಿ’ಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ಡೆನಿಸ್ ಡೆಸಾ ಮೊದಲಾದವರು ಉಪಸ್ಥಿತರಿದ್ದರು.