Advertisement
ಸೊಳ್ಳೆ ಬತ್ತಿ, ಬೇವಿನ ಹೊಗೆ, ಚರ್ಮಲೇಪನಗಳು, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಬೇಕು. ವಯೋವೃದ್ಧರು ಹಾಗೂ ಮಕ್ಕಳು ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಸಿಮೆಂಟ್ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ ತುಂಬಿರುವ ಹೂ ಕುಂಡಗಳು, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಸಂಪೂರ್ಣ ಖಾಲಿ ಮಾಡಬೇಕು. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಸಾಧ್ಯವಾಗಲಿದೆ.
ಡೆಂಗ್ಯೂ ಜ್ವರ ಲಕ್ಷಣ ಇರುವವರು ಸರಿಯಾದ ಸಮಯಕ್ಕೆ ನೀರು ಸೇವನೆ ಮಾಡಬೇಕು. ವೈದ್ಯರ ಸಲಹೆ ಮೇರೆಗೆ ಪಪ್ಪಾಯ ಎಲೆಯ ರಸ, ತುಳಸಿ ಎಲೆಯ ರಸ, ಕಿವಿ ಹಣ್ಣುಗಳ ಸೇವನೆ, ಬೇವಿನ ಎಲೆಗಳಿಂದ ಮಾಡಿದ ಕಷಾಯ, ದಾಳಿಂಬೆ ಹಣ್ಣು, ಎಳನೀರು, ಅರಿಶಿನ ಬೆರೆಸಿದ ಹಾಲು, ಪಾಲಕ್ ಸೊಪ್ಪು ಸಹಿತ ವಿಟಮಿನ್ ಸಿ ಅಂಶಗಳಿರುವ ವಸ್ತುಗಳನ್ನು ನಿಯಮಿತವಾಗಿ ಸೇವಿಸಬೇಕು. ಸಿಟ್ರಿಸ್ ಅಂಶಗಳು ಹೆಚ್ಚಿರುವ ಆಹಾರಗಳಾದ ಬಾದಾಮಿ, ಬೆಳ್ಳುಳ್ಳಿಗಳೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ರೋಗಲಕ್ಷಣಗಳು ಕಂಡುಬಂದಾಗ ಕೂಡಲೇ ವೈದ್ಯರಲ್ಲಿಗೆ ತೆರಳಿ ರಕ್ತ ಪರೀಕ್ಷೆ ಮಾಡುವುದು ಉತ್ತಮ ಎಂಬುವುದು
ತಜ್ಞ ವೈದ್ಯರ ಅಭಿಪ್ರಾಯ.