Advertisement

ಉಡುಪಿ : ಕಂಟೈನ್‌ಮೆಂಟ್‌ ಪ್ಲಾನ್‌ ರಚನೆಗೆ ಡಿಸಿ ನೇತೃತ್ವದ ಸಭೆ

10:36 AM Apr 13, 2020 | sudhir |

ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ ಮೂರು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಎಲ್ಲರೂ ಹೊರಗಿನಿಂದಲೇ ಬಂದವರು. ಈ ಪೈಕಿ ಒಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಗೊಂಡಿದ್ದಾರೆ. ಇನ್ನಿಬ್ಬರ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯ ಒಳಗೆ ಕೋವಿಡ್ ಪ್ರಕರಣಗಳ ಸಾಧ್ಯತೆ ಇಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಕಂಟೈನ್‌ಮೆಂಟ್‌ ಪ್ಲಾನ್‌ ಸಿದ್ದಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಜಿ.ಪಂ. ಸಭಾಂಗಣದಲ್ಲಿ ರವಿವಾರ ಜಿಲ್ಲೆಯ ಕಂಟೈನ್‌ಮೆಂಟ್‌ ಪ್ಲಾನ್‌ ರಚನೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಥಳೀಯವಾಗಿ ಪಾಸಿಟಿವ್‌ ಪ್ರಕರಣ ಕಂಡುಬಂದಲ್ಲಿ 3 ಕಿ.ಮೀ. ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್‌ ಝೊನ್‌ ವ್ಯಾಪ್ತಿ ಹಾಗೂ ಆ ಬಳಿಕ 2 ಕಿ.ಮೀ. ವ್ಯಾಪ್ತಿಯಲ್ಲಿ ಬಫ‌ರ್‌ ಝೊನ್‌ ನಿರ್ಮಾಣ ಮಾಡಲಾಗುವುದು ಎಂದರು.

ಕರ್ತವ್ಯಗಳ ಬಗ್ಗೆ ಮಾಹಿತಿ
ಕಂಟೈನ್‌ಮೆಂಟ್‌ ಝೊನ್‌ ನಿರ್ಮಾಣ ಮಾಡಿದಲ್ಲಿ ಆ ಸ್ಥಳದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಅಗತ್ಯ ಸಿಬಂದಿ ನಿಯೋಜನೆ ಮತ್ತು ಅವರು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ವೈದ್ಯಕೀಯ, ಕಂದಾಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿವರಿಸಿದರು.

ಕೇವಲ 2 ಗಂಟೆಗಳಲ್ಲಿ ಕಂಟೈನ್‌ಮೆಂಟ್‌ ಝೊನ್‌ ನಿರ್ಮಾಣ ಮಾಡಲು ಮತ್ತು ಅನಂತರದ 4 ಗಂಟೆಗಳ ಅವಧಿಯಲ್ಲಿ ವೈದ್ಯಕೀಯ, ಕಂಟ್ರೋಲ್‌ ರೂಂ ಸಹಿತ ಎಲ್ಲ ಅಗತ್ಯಗಳನ್ನು ಪೂರೈಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

Advertisement

ಕಟ್ಟುನಿಟ್ಟಿನ ತಪಾಸಣೆ
ಜಿಲ್ಲೆಯ ಎಲ್ಲ ಗಡಿಭಾಗಗಳಲ್ಲಿ ತಹಶೀಲ್ದಾರ್‌ಗಳು ಮತ್ತು ಪೊಲೀಸ್‌ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಹಾಗೂ ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಸೂಚನೆ ನೀಡಿದರು. ಜಿಲ್ಲಾ ಕೊರೊನಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಕಂಟೈನ್‌ಮೆಂಟ್‌ ಪ್ಲಾನ್‌ ಬಗ್ಗೆ ವಿವರಿಸಿದರು.

ಜಿ.ಪಂ. ಸಿಇಒ ಪ್ರೀತಿ ಗೆಹೊÉàಟ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಆರೋಗ್ಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಅನ್ಯ ಜಿಲ್ಲೆ ಪಾಸ್‌ಗಿಲ್ಲ ಮಾನ್ಯತೆ
ಹೊರ ಜಿಲ್ಲೆಯಿಂದ ವಾಹನಗಳು ಮತ್ತು ಪ್ರಯಾಣಿಕರು ಬರುವುದನ್ನು ನಿರ್ಬಂಧಿಸಲಾಗಿದೆ. ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ವ್ಯಕ್ತಿಗಳಿಗೆ ಮತ್ತು ಸರಕು ಸಾಗಾಟದ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಇತರ ಜಿಲ್ಲೆಗಳ ಪಾಸ್‌ಗಳನ್ನು ಮಾನ್ಯ ಮಾಡುವುದಿಲ್ಲ. ಆರೋಗ್ಯದ ಹಿತ ದೃಷ್ಟಿಯಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಜನತೆ ಸಹಕಾರ ನೀಡಬೇಕು. ಅಕ್ರಮವಾಗಿ ಒಳಬಂದ ವರಿಗೆ ಕಡ್ಡಾಯವಾಗಿ 14 ದಿನಗಳ ಸರಕಾರಿ ಕ್ವಾರಂಟೈನ್‌ ವಿಧಿಸುವುದಾಗಿ ಡಿಸಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next