Advertisement
ಗುರುವಾರ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಸಂವಾದದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸಿದರು. ಸೆಲ್ಫಿ ಪಾಯಿಂಟ್, ತಡೆಬೇಲಿ, ಸ್ವತ್ಛತೆ ಮೊದಲಾದ ಕೆಲಸಗಳು ನಡೆಯುತ್ತಿವೆ. ಪ್ರಸ್ತುತ ಸಮುದ್ರ ಪ್ರಕ್ಷುಬ್ಧವಾಗಿದ್ದು, ವಾತಾವರಣವನ್ನು ಗಮನಿಸಿಕೊಂಡು ಅನುಮತಿ ನೀಡಬೇಕಿದೆ ಎಂದರು.
Related Articles
Advertisement
ವಾರ್ತಾಧಿಕಾರಿ ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು. ಚೇತನ್ ಮಟಪಾಡಿ ನಿರೂಪಿಸಿ, ವಂದಿಸಿದರು.
ಪ್ರಮುಖ ಅಂಶಗಳು :
- ಹಿಂದಿನ ವರ್ಷಗಳಲ್ಲಿ ರಸ್ತೆ ವಿಸ್ತರಣೆಗಾಗಿ ಕಡಿದಿರುವ ಮರಗಳ ಸಂಖ್ಯೆ ಮತ್ತು ಎಷ್ಟು ಪ್ರಮಾಣದಲ್ಲಿ ಅರಣ್ಯವ್ನು ಬೆಳೆಸಲಾಗಿದೆ ಎಂಬ ವಾಸ್ತವ ಚಿತ್ರಣವನ್ನು ತಿಳಿಸಲಾಗುವುದು.
- ಹೆದ್ದಾರಿಗಳಲ್ಲಿ ಮೀನಿನ ನೀರು ಚೆಲ್ಲಿಕೊಂಡು ಸಾಗುವ ಲಾರಿಗಳ ವಿರುದ್ಧ ಕಠಿನ ಕ್ರಮಕ್ಕೆ ಪೊಲೀಸ್, ಆರ್‌ಟಿಒಗೆ ಸೂಚನೆ.
- ಹದಗೆಟ್ಟಿರುವ ಇಂದ್ರಾಳಿ ಸೇತುವೆ ಕಾಮಗಾರಿ ಅ. 1ರಿಂದ ನಡೆಯಲಿದೆ.
- ಇಂದ್ರಾಳಿ ರೈಲ್ವೇ ಸೇತುವೆ ಯೋಜನೆಯ ವಿನ್ಯಾಸ ಬದಲಾವಣೆಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ ಅನುಮೋದನೆಗೆ ಬಾಕಿ ಇದೆ. ನಮ್ಮ ಎಂಜಿನಿಯರ್‌ಗಳು ದಿಲ್ಲಿಯಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದಾರೆ.
- ಉಡುಪಿ ನಗರದ ಒಳಚರಂಡಿ ವ್ಯವಸ್ಥೆ ಹಂತಹಂತವಾಗಿ ಸುಧಾರಣೆಯತ್ತ ಸಾಗುತ್ತಿದೆ. ಮಳೆ ನೀರು ಹರಿಯುವ ನದಿ, ಕಾಲುವೆಗಳನ್ನು ಒತ್ತುವರಿ ಮಾಡಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.