Advertisement

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

01:39 AM May 07, 2021 | Team Udayavani |

ಉಡುಪಿ: ಜಿಲ್ಲೆಯ ಲಾಕ್‌ಡೌನ್‌ ಸಮಯದಲ್ಲಿ ವ್ಯವಹಾರ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಜತೆ ಚರ್ಚಿಸಿ ನಿರ್ಧಾರ ತಳೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಹೇಳಿದ್ದಾರೆ.

Advertisement

“ಉದಯವಾಣಿ’ಗೆ ಪ್ರತಿಕ್ರಿಯಿ ಸಿರುವ ಅವರು, ಜಿಲ್ಲೆಗೆ 12 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಬೇಕೆಂದು ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದೇವೆ. ಈಗ ಸದ್ಯ ಎರಡು ದಿನಗಳಿಗಾಗುವಷ್ಟು ಆಕ್ಸಿಜನ್‌ ದಾಸ್ತಾನು ಇದೆ. ಸರಕಾರ ಇನ್ನಷ್ಟೇ ಜಿಲ್ಲೆಗೆ ಕೋಟಾವನ್ನು ನಿಗದಿಪಡಿಸಲಿದೆ ಎಂದರು.

ಐಸಿಯು ಭರ್ತಿ :

ಜಿಲ್ಲೆಯಲ್ಲಿ ಮೀಸಲಿರಿಸಿದ 1,900 ಬೆಡ್‌ಗಳಲ್ಲಿ ಬುಧವಾರ 670 ಬೆಡ್‌ಗಳಲ್ಲಿ ರೋಗಿಗಳಿದ್ದರು. ಐಸಿಯು ಭರ್ತಿಯಾಗಿದೆ. ಮಣಿಪಾಲ ಆಸ್ಪತ್ರೆ ಮತ್ತು ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳನ್ನು ಹೆಚ್ಚಿಸಲು ತಿಳಿಸಿದ್ದು ಅವರು ಹೆಚ್ಚಿಸಿದ್ದಾರೆ. ಗುರುವಾರ ಐಸಿಯು ಕೊರತೆ ಕುರಿತು ದೂರುಗಳು ಬಂದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

340 ಡೋಸ್‌ ಲಸಿಕೆ ನೀಡಿಕೆ :

Advertisement

ಮಂಗಳವಾರ ಆಗಮಿಸಿದ 2,000 ಡೋಸ್‌ಗಳಲ್ಲಿ 340 ಡೋಸ್‌ಗಳನ್ನು ಎರಡನೇ ಬಾರಿಗೆ ಪಡೆಯುವವರಿಗೆ ಗುರುವಾರ ನೀಡಲಾಯಿತು. ಸದ್ಯಕ್ಕೆ 1,060 ಡೋಸ್‌ಗಳು ಉಳಿದಿದ್ದು, ಅದನ್ನು ಮುಂದಿನ ದಿನಗಳಲ್ಲಿ ಎರಡನೇ ಬಾರಿಗೆ ಪಡೆಯಲು ಬಾಕಿ ಉಳಿದಿರುವವರಿಗೆ ನೀಡಲಾಗು ವುದು. ಫ‌ಲಾನುಭವಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಲಾಗುವುದು ಎಂದು ವೈದ್ಯಾಧಿ ಕಾರಿಗಳು ತಿಳಿಸಿದ್ದಾರೆ.

ಲಸಿಕೆ: ಎರಡನೆಯ ಡೋಸ್‌ ಮಾತ್ರ :

ಕೊವಿಶೀಲ್ಡ್‌ ಪ್ರಥಮ ಡೋಸ್‌ ತೆಗೆದುಕೊಂಡು ಎಂಟು ವಾರ ಮೀರಿದವರಿಗೆ ಮಾತ್ರ ಇನ್ನು ಕೆಲವು ದಿನ ಎರಡನೆಯ ಡೋಸ್‌ ನೀಡಲಾಗುತ್ತದೆ. ಕೊವ್ಯಾಕ್ಸಿನ್‌ ಲಸಿಕೆಯನ್ನು ಮಾ. 21ರ ಮೊದಲು ಪಡೆದ287 ಜನರಿಗೆ ಶುಕ್ರವಾರ ಸಂಜೆ 2ನೇ ಡೋಸ್‌ ವ್ಯಾಕ್ಸಿನ್‌ ಬರಲಿದೆ. ಪ್ರಸ್ತುತ ವ್ಯಾಕ್ಸಿನ್‌ ಪೂರೈಕೆ ಇಲ್ಲದ ಕಾರಣ ಉಡುಪಿಯಲ್ಲಿ ಸೈಂಟ್‌ ಸಿಸಿಲಿ ಶಾಲೆ ಆವರಣ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ.

ಲಸಿಕೆ ಪೂರೈಕೆ ಕಡಿಮೆ ಇರುವುದ ರಿಂದ ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದು ಪ್ರಥಮ ಡೋಸ್‌ ತೆಗೆದುಕೊಂಡು ಅವಧಿ ಮುಗಿಯುತ್ತಿರುವವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾ ಗುತ್ತದೆ. ಲಸಿಕೆ ಪೂರೈಕೆ ಯಾದಂತೆ ಇಂತಹ ಅರ್ಹರಿಗೆ ಆಶಾ ಕಾರ್ಯಕರ್ತೆಯರ ಮೂಲಕ ತಿಳಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸ್ವಯಂ ಆಸಕ್ತಿಯಿಂದ ಲಸಿಕೆ ವಿತರಣೆ ಕೇಂದ್ರಕ್ಕೆ ತೆರಳುವುದು ಬೇಡ ಎಂದು ಆರೋಗ್ಯ ಇಲಾಖೆಯ ಮೂಲಗಳು ವಿನಂತಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next