Advertisement
ಕರ್ಣಾಟಕ ಬ್ಯಾಂಕಿನ ಲೀಗಲ್ ಆಫೀಸರ್, ವಾದಿರಾಜ ರಸ್ತೆಯ ನಿವಾಸಿ ರಾಜಗೋಪಾಲ್ ಸಾಮಗ (42) ಮೃತರು. ಅವರು ನಿವೃತ್ತ ಪೊಲೀಸ್ ಕೃಷ್ಣ ಸಾಮಗ ಅವರ ಪುತ್ರ. ರಾಜಗೋಪಾಲ್ ಅವರ ಪತ್ನಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಅವರಿಗೆ ಒಂದೂವರೆ ವರ್ಷದ ಪುತ್ರನಿದ್ದಾನೆ.
Related Articles
Advertisement
ಕೋಣೆಯ ಬಾಗಿಲು ಮುರಿದು ಪರಿಶೀಲಿಸಿದಾಗ ರಾಜಗೋಪಾಲ್ ಸಾಮಗ ಅವರು ಬೆಂಕಿಯಿಂದ ಸುಟ್ಟು ಮೃತಪಟ್ಟಿದ್ದರು.
ಲ್ಯಾಪ್‌ಟಾಪ್ ಸಿಡಿದಿರಬಹುದೇ?ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದು ಆತ್ಮಹತ್ಯೆಯೋ? ಅಥವಾ ಲ್ಯಾಪ್‌ಟಾಪ್ ಸಿಡಿದು ಅವಘಡ ಸಂಭವಿಸಿತೇ? ಇನ್ಯಾವುದೋ ಕಾರಣವಿರಬಹುದೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.