Advertisement
ಕೋವಿಡ್ ಭೀತಿ ಆರಂಭವಾದಾ ಗಲೇ ಉಡುಪಿ ಜಿಲ್ಲೆಗೆ ಕೋವಿಡ್ ಪರೀಕ್ಷಾ ಕೇಂದ್ರ ಬೇಕೆಂಬ ಕೂಗು ಇತ್ತು. ಇದೀಗ ಕೋವಿಡ್-19 ಲ್ಯಾಬ್ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಒಳಾಂಗಣ ವಿನ್ಯಾಸಕ್ಕೆ 45 ಲ.ರೂ. ಬಿಡುಗಡೆಯಾಗಿದೆ. ಇಲ್ಲಿ ಸೆಂಟ್ರಲ್ ಎಸಿ, ಬ್ಲಿಡ್ ಪಾಯಿಂಟ್ಸ್, ವಾಲ್ ಸೇರಿದಂತೆ ಇತರ ಒಳಾಂಗಣ ವಿನ್ಯಾಸ ಕಾರ್ಯ ನಡೆಯಬೇಕಿದೆ. ಕಾಮಗಾರಿ ಪ್ರಾರಂಭವಾದ 15 ದಿನಗಳೊಳಗೆ ಪೂರ್ಣವಾಗಲಿದೆ.
ಕೋವಿಡ್-19ರ ಶಂಕಿತ, ಸೋಂಕಿತರಿಗಾಗಿ 55 ಲ.ರೂ. ವೆಚ್ಚದ ಆಮ್ಲಜನಕ ಹಾಸಿಗೆ ಸೇರಿದಂತೆ ಇತರ ವಸ್ತುಗಳ ಖರೀದಿಗೆ ಅನುದಾನ ಬಿಡುಗಡೆಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆಗೊಳಿ ಸಿದ ಮಾಹಿತಿಯಲ್ಲಿ ಕೋವಿಡ್ ವೈರಸ್ ಪತ್ತೆಗಾಗಿ ಸ್ಯಾಂಪಲ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿತ್ತು. ಜಿಲ್ಲೆಯ ಒಟ್ಟು ಜನಸಂಖ್ಯೆ 13 ಲಕ್ಷ ಇದ್ದು, ಈ ಪೈಕಿ ಮೇ 8ರ ವರೆಗೆ 4,000ಕ್ಕೂ ಅಧಿಕ ಮಂದಿಯ ಕೋವಿಡ್ ಮಾದರಿಯ ಪರೀಕ್ಷೆ ನಡೆಸಲಾಗಿದೆ.
Related Articles
ಇದೀಗ ಲಾಕ್‌ಡೌನ್ ಸಡಿಲಿಕೆಯಾ ಗಿದ್ದು, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಿಂದ ಉಡುಪಿಗೆ ಸಾವಿರಾರು ಸಂಖ್ಯೆಯ ಜನ ಬರುವವರಿದ್ದಾರೆ. ಅಂತಹ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಸದ್ಯ ಜಿಲ್ಲೆಯ ಎಲ್ಲ ಮಾದರಿಗಳ ಪರೀಕ್ಷೆ ಮಂಗಳೂರಿನಲ್ಲಿ ನಡೆಯುತ್ತಿರು ವುದರಿಂದ ಪ್ರತೀ ವರದಿ ಕೈಸೇರಲು ಮೂರ್‍ನಾಲ್ಕು ದಿನ ಬೇಕಾಗುತ್ತದೆ. ಇದರಿಂದ ಸಮಯ, ಹಣ ವ್ಯಯವಾಗುವುದಲ್ಲದೆ, ರೋಗಿ ಮಾನಸಿಕ ಆರೋಗ್ಯದ ಮೇಲೂ ಹೊಡೆತ ಬೀಳುತ್ತಿದೆ. ಅದಷ್ಟು ಬೇಗ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ನಿರ್ಮಾಣವಾಗಬೇಕು ಎನ್ನುವುದು ಸಾರ್ವಜನಿಕರ ಮನವಿ.
Advertisement
ಹೊರರಾಜ್ಯಗಳ 228 ಜನರ ಆಗಮನ ಉಡುಪಿ: ಉಡುಪಿ ಜಿಲ್ಲೆಗೆ ಹೊರರಾಜ್ಯಗಳ 228 ಜನರು ಇದುವರೆಗೆ ಆಗಮಿಸಿದ್ದಾರೆ.
ಮೇ 4ರಿಂದ 8ರ ವರೆಗೆ ಜಿಲ್ಲೆಯ ಏಳು ತಾಲೂಕುಗಳಿಗೆ 172 ಪುರುಷರು, 44 ಮಹಿಳೆಯರು, 12 ಮಕ್ಕಳು ಆಗಮಿಸಿದರು. ಇವರಲ್ಲಿ ತೆಲಂಗಾಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಆಂಧ್ರ, ಕೇರಳ, ತಮಿಳುನಾಡಿನಿಂದ ಬಂದ ವರು ಇದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.