Advertisement
ಉಡುಪಿಯ 122, ಕುಂದಾಪುರದ 40, ಕಾರ್ಕಳದ 51, ಅನ್ಯ ಜಿಲ್ಲೆಯ 4 ಮಂದಿಗೆ ಸೋಂಕು ದೃಢಪಟ್ಟಿದೆ. 59 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ ಇತರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 158 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ.
ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆಯ ಮೂವರಿಗೆ, ಕುಂದಾಪುರ ತಾಲೂಕಿನ 12 ಮಂದಿಗೆ ಸೇರಿದಂತೆ ಒಟ್ಟು 15 ಮಂದಿಗೆ ಮಂಗಳವಾರ ಕೊರೊನಾ ದೃಢಪಟ್ಟಿದೆ. ಕುಂದಾಪುರ ತಾಲೂಕಿನ ಪುರಸಭೆ ವ್ಯಾಪ್ತಿ, ಹೆಮ್ಮಾಡಿ ಮೂವರು, ವಂಡ್ಸೆ, ಕುಂಭಾಶಿಯ ತಲಾ ಇಬ್ಬರು, ಗಂಗೊಳ್ಳಿ, ಚಿತ್ತೂರಿನ ತಲಾ ಒಬ್ಬರು ಬಾಧಿತರಾಗಿದ್ದಾರೆ.
Related Articles
ಕೋಟ: ಮಹಿಳೆಯೋರ್ವರು ಮೃತಪಟ್ಟು 5 ದಿನಗಳ ಬಳಿಕ ಆಕೆಗೆ ಕೊರೊನಾ ಪಾಸಿಟಿವ್ ಎನ್ನುವ ವರದಿ ಬಂದಿದ್ದು ಮನೆಯನ್ನು ಸೀಲ್‌ಡೌನ್ ಮಾಡಲು ಬಂದ ಅಧಿಕಾರಿಗಳ ವಿರುದ್ಧ ಕುಟುಂಬಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಲಿಗ್ರಾಮದ ಕಾರ್ಕಡದಲ್ಲಿ ಸೋಮವಾರ ನಡೆದಿದೆ.
ಮಹಿಳೆ ಅನಾರೋಗ್ಯದಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆ. 19ರಂದು ಮೃತಪಟ್ಟಿದ್ದರು. ಸಾವಿಗೆ ಬಹು ಅಂಗಾಗ ವೈಫಲ್ಯ ಕಾರಣ ಎನ್ನಲಾಗಿತ್ತು. ಉಡುಪಿ ಸರಕಾರಿ ಆಸ್ಪತ್ರೆಯ ಮೂಲಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣವಿಲ್ಲ ಎಂದು ತಿಳಿಸಲಾಗಿತ್ತು. 5 ದಿನಗಳ ಅನಂತರ ಕೊರೊನಾ ಪಾಸಿಟಿವ್ ವರದಿ ನೀಡಿರುವುದರಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದವರಲ್ಲಿ ಆತಂಕಕ್ಕೆ ಕಾರಣವಾಗಿದೆ.
Advertisement