ಉಡುಪಿ : ಜಿಲ್ಲೆಯಲ್ಲಿ ಮಂಗಳವಾರ 84 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಕೋವಿಡ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು ಮಂಗಳವಾರ ಪುತ್ತಿಗೆ ಮಠದ ಶ್ರೀಗಳಿಗೂ ಕೋವಿಡ್ ಸೋಂಕು ದೃಢವಾಗಿದೆ.
ಉಡುಪಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಎರಡು ದಿನಗಳ ಕಾಲ ಕೋರ್ಟ್ ಸಂಕೀರ್ಣ ಸೀಲ್ ಡೌನ್ ಆಗಿರಲಿದೆ.
ಇದನ್ನೂ ಓದಿ: ಕೋವಿಡ್ ಕಳವಳ ಜು.21: ರಾಜ್ಯದಲ್ಲಿ 3649 ಹೊಸ ಪ್ರಕರಣಗಳು ; 61 ಸಾವು, 1664 ಚೇತರಿಕೆ
ಉಡುಪಿ ಎಸ್ ಪಿ ಕಚೇರಿಯ ಸಿಬ್ಬಂದಿಯ ವರದಿ ಪಾಸಿಟಿವ್ ಬಂದಿತ್ತು. ಉಡುಪಿ ಕರಾವಳಿ ಬೈ ಪಾಸ್ ಬಳಿ ಇರುವ ಹೋಟೆಲಿನ 18 ಮಂದಿ ಸಿಬ್ಬಂದಿಗಳಲ್ಲಿಯೂ ಸೋಂಕು ದೃಢ ಪಟ್ಟಿತ್ತು ಇದೀಗ ಹೋಟೆಲನ್ನು ಸೀಲ್ ಡೌನ್ ಮಾಡಲಾಗಿದೆ.
ಬೈಂದೂರು ಸಮುದಾಯ ಅರೋಗ್ಯ ಕೇಂದ್ರದ ನಾಲ್ವರು ಸಿಬ್ಬಂದಿಗಳಲ್ಲಿಯೂ ಸೋಂಕು ದೃಢ ಪಟ್ಟಿದೆ ಮುನ್ನೆಚ್ಚರಿಕಾ ಕ್ರಮವಾಗಿ ಅರೋಗ್ಯ ಕೇಂದ್ರವನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ.