Advertisement

ಉಡುಪಿ ಜಿಲ್ಲೆಯಲ್ಲಿ 314 ಪಾಸಿಟಿವ್‌ ಪ್ರಕರಣ ಪತ್ತೆ! 5 ಮಂದಿ ಸಾವು

07:29 PM Aug 08, 2020 | sudhir |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೆ ಐದು ಸಾವನ್ನಪ್ಪಿದ್ದು ಇದುವರೆಗೆ ಒಟ್ಟು 60 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಶನಿವಾರ 314 ಮಂದಿಗೆ ಪಾಸಿಟಿವ್‌ ಮತ್ತು 1,379 ಮಂದಿಗೆ ನೆಗೆಟಿವ್‌ ಪ್ರಕರಣ ವರದಿಯಾಗಿದೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಇದುವೇ ಅತಿ ಹೆಚ್ಚು ಪಾಸಿಟಿವ್‌ ವರದಿಯಾದ ದಿನವಾಗಿದೆ. ಇದೇ ಮೊದಲ ಬಾರಿಗೆ ಒಂದೇ ದಿನದ ಗಂಟಲುದ್ರವ ಮಾದರಿ ಸಂಗ್ರಹ 2,000 ದಾಟಿದೆ.

Advertisement

ಉಡುಪಿ ತಾಲೂಕಿನ 76 ವರ್ಷ, 77 ವರ್ಷ, 65 ವರ್ಷದವರು, 50 ವರ್ಷದ ಮಹಿಳೆ, ಕುಂದಾಪುರ ತಾಲೂಕಿನ 56 ವರ್ಷದವರು ಕೋವಿಡ್ ಸೋಂಕಿನಿಂದ ಮೃತಪಟ್ಟರು. ಇವರೆಲ್ಲರಿಗೂ ಬೇರೆ ಆರೋಗ್ಯದ ಸಮಸ್ಯೆಗಳಿದ್ದವು.

ಪಾಸಿಟಿವ್‌ ಪ್ರಕರಣಗಳಲ್ಲಿ ರೋಗಲಕ್ಷಣ ಇರುವ 48 ಪುರುಷರು, 40 ಮಹಿಳೆಯರು, ರೋಗ ಲಕ್ಷಣ ಇರದ 116 ಪುರುಷರು, 110 ಮಹಿಳೆಯರು ಇದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 192, ಕುಂದಾಪುರ ತಾಲೂಕಿನ 87, ಕಾರ್ಕಳ ತಾಲೂಕಿನ 30, ಹೊರ ಜಿಲ್ಲೆಯ ಐವರು ಇದ್ದಾರೆ. ಕೋವಿಡ್‌ ಆಸ್ಪತ್ರೆಗೆ 203, ಮನೆ ಐಸೊಲೇಶನ್‌ ಆರೈಕೆಗೆ 111 ದಾಖಲಾಗಿದ್ದಾರೆ.

ಶನಿವಾರ 2,030 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,540 ಜನರ ವರದಿಗಳು ಕೈಸೇರಬೇಕಾಗಿದೆ. ಶನಿವಾರ ಆಸ್ಪತ್ರೆಗಳಿಂದ 59, ಹೋಮ್‌ ಐಸೊಲೇಶನ್‌ನಿಂದ 30 ಒಟ್ಟು 89 ಮಂದಿ ಬಿಡುಗಡೆಗೊಂಡಿದ್ದಾರೆ. 1,287 ಮಂದಿ ಆಸ್ಪತ್ರೆಗಳಲ್ಲಿ, 1,225 ಮಂದಿ ಮನೆಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next