Advertisement
ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾರ್ಖಾನೆ ಅವ್ಯವಹಾರ ನಡೆದಿದ್ದಲ್ಲಿ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ರೈತರಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ವಾರದ ಒಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ. ಎಲ್ಲ ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಸರಕಾರ ಸಿದ್ಧವಿದೆ. ರೈತರ ಹಿತವನ್ನು ಕಾಪಾಡುತ್ತೇವೆ. ಬೆಳೆ ಸಮೀಕ್ಷೆ ಶೇ. 92ರಷ್ಟು ಪೂರ್ಣಗೊಂಡಿದೆ. ಕೇಂದ್ರ ಬರ ಅಧ್ಯಯನ ತಂಡವು ವಾರದ ಒಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದೆ. ರಾಜ್ಯಕ್ಕೆ ಗರಿಷ್ಠ ಪರಿಹಾರ ಕೊಡಲು ಕೇಂದ್ರ ಸರಕಾರ ಕ್ರಮವಹಿಸಬೇಕು ಎಂದರು.
ಯಾರ್ಯಾರ ಮನೆಯಲ್ಲಿ ದುಡ್ಡು ಸಿಕ್ಕಿದ್ದರೆ ಕಾಂಗ್ರೆಸ್‌ಗೆ ಏನು ಸಂಬಂಧ ಎಂದು ಚೆಲುವರಾಯ ಸ್ವಾಮಿ ಪ್ರಶ್ನಿಸಿದರು. ಬಿಜೆಪಿ ನಾಯಕರ ಆರೋಪಗಳಲ್ಲಿ ಹುರುಳಿಲ್ಲ. ಇವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಬಿಜೆಪಿ ಅಧಿಕಾರ ಕಳೆದುಕೊಂಡು ಕಂಗಾಲಾಗಿದೆ. ಕಾಂಗ್ರೆಸ್‌ನ ಜನಪರ ಯೋಜನೆ, ಒಳ್ಳೆಯ ಆಡಳಿತ ಅವರಿಂದ ಸಹಿಸಲಾಗುತ್ತಿಲ್ಲ. ಎಲ್ಲಿಯೋ ಹಣ ಸಿಕ್ಕಿದ್ದಕ್ಕೆ ಕಾಂಗ್ರೆಸ್‌ಗೆ ಸಂಬಂಧವಿಲ್ಲ. ಇದನ್ನು ಕೇಂದ್ರದ ತನಿಖಾ ಸಂಸ್ಥೆಗಳು ನೋಡಿಕೊಳ್ಳುತ್ತವೆ. ಬಿಜೆಪಿ ಸರಕಾರ ಅವಧಿಯಲ್ಲಿ ಶಾಸಕರ ಮನೆಯವರಿಂದಲೇ ಕಚೇರಿಯಲ್ಲಿ ಲಂಚದ ವ್ಯವಹಾರ ನಡೆದು ಸಿಕ್ಕಿಬಿದ್ದಿದ್ದರು. ಸಿಎಂ ರಾಜಿನಾಮೆ ಕೇಳಲು ಇವರಿಗೆ ನೈತಿಕತೆ ಇಲ್ಲ ಎಂದರು. ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಸೇರಿಕೊಂಡರೆ ಏನು ಉಪಯೋಗ ಇಲ್ಲ. ಕಾಂಗ್ರೆಸ್ 20 ಸೀಟು ಗೆಲ್ಲುತ್ತದೆ ಎಂದು ಚೆಲುವರಾಯ ಸ್ವಾಮಿ ತಿಳಿಸಿದರು.