Advertisement
ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪ್ರದೇಶಕ್ಕೆ ಬುಧವಾರ ಬೆಳಗ್ಗೆ ಶಾಸಕ ಯಶ್‌ಪಾಲ್ ಸುವರ್ಣ ಜತೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, 2018ರಲ್ಲಿ ಈ ಕಾಮಗಾರಿ ಆರಂಭವಾಗಿದ್ದು, ರೈಲ್ವೆ ಇಲಾಖೆ ವಿಳಂಬದಿಂದ ವೇಗ ಪಡೆದುಕೊಂಡಿಲ್ಲ. 138 ಟನ್ ತೂಕದ ಗರ್ಡರ್ ಅಳವಡಿಸುವ ಯೋಜನೆ ಇದಾಗಿದ್ದು, ಸೇತುವೆಯ ಉದ್ದವನ್ನು 38 ಮೀಟರ್ ನಿಂದ 58 ಮೀಟರ್‌ಗೆ ಹೆಚ್ಚಿಸಲಾಗಿದೆ. ಹೀಗಾಗಿ ಗರ್ಡರ್‌ಗಳಿಗೆ ಅಳವಡಿಸುವ ಸ್ಟೀಲ್ 420 ಟನ್‌ಗೆ ಏರಿಕೆಯಾಗಿದೆ. 12.50 ಮೀಟರ್ ಅಗಲ ಬರಲಿದ್ದು, ಇದರಲ್ಲಿ ಎರಡು ಕಡೆ 1.50 ಮೀಟರ್ ಪಾದಚಾರಿ ಮಾರ್ಗ ಇರಲಿದೆ ಎಂದರು.
Related Articles
Advertisement
ರಾಜ್ಯ ಸರಕಾರದ ವಿರುದ್ಧ ಸಂಸದ ಕೋಟ ಆಕ್ರೋಶಉಡುಪಿ: ರಾಜ್ಯದಲ್ಲಿ ಪಡಿತರ ವ್ಯವಸ್ಥೆ ಅತ್ಯಂತ ಗೊಂದಲದಲ್ಲಿದೆ. ಬಡವರಿಗೆ ರೇಷನ್ ವಿತರಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಸರ್ವರ್ ಡೌನ್ ನೆಪವೊಡ್ಡಿ ಕೇವಲ 5-6 ಶೇ. ಕಾರ್ಡ್‌ದಾರರಿಗೆ ಮಾತ್ರ ಪಡಿತರ ನೀಡಲಾಗಿದೆ. ಕಾರ್ಡ್ ರದ್ದತಿಯನ್ನು ನಿಲ್ಲಿಸದಿದ್ದರೆ ಬಿಜೆಪಿ ವತಿಯಿಂದ ವಿಧಾನಸೌಧ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಸರ್ವರ್ ಡೌನ್ ಎಂದು ಹೇಳಿ ಜನ ಕಾಯುವ ಪರಿಸ್ಥಿತಿ ಉಂಟಾಗಿದೆ. ಹೊಸ ಸರ್ವರ್ ಮಾಡುವ ಯೋಚನೆ ಇದ್ದರೆ, ಒಂದು ತಿಂಗಳು ಮ್ಯಾನ್‌ವಲ್ ವ್ಯವಸ್ಥೆಯಡಿ ಪಡಿತರ ವಿತರಣೆ ಮಾಡಬೇಕು. ಮ್ಯಾನುವಲ್ ಆಗಿಯೂ ನೀಡುತ್ತಿಲ್ಲ, ಬಯೋಮೆಟ್ರಿಕ್ ಆಗುತ್ತಿಲ್ಲ. ನೂರು ಜನ ನಿಂತರೆ 25 ಜನರಿಗೆ ರೇಷನ್ ಸಿಗುತ್ತಿದೆ ಎಂದರು.