Advertisement

Udupi ಕೊಚ್ಚಿನ್‌ ಶಿಪ್‌ಯಾರ್ಡ್‌: “ಓಷಿಯನ್‌ ಗ್ರೇಸ್‌’ ಟಗ್‌ ಲೋಕಾರ್ಪಣೆ

11:51 PM Sep 20, 2023 | Team Udayavani |

ಮಲ್ಪೆ: ಕೇಂದ್ರದ ಬಂದರು, ಶಿಪ್ಪಿಂಗ್‌ ಹಾಗೂ ವಾಟರ್‌ವೆà ಸಚಿವಾಲಯದ ಆಡಳಿತಕ್ಕೊಳಪಟ್ಟ ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿ.ನ ಸಹಸಂಸ್ಥೆ ಮಲ್ಪೆಯ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ (ಯುಸಿಎಸ್‌ಎಲ್‌) ನಲ್ಲಿ ನಿರ್ಮಾಣಗೊಂಡ 62 ಟನ್‌ ಸಾಮರ್ಥ್ಯದ “ಓಷಿಯನ್‌ ಗ್ರೇಸ್‌’ ಟಗ್‌ ಬುಧವಾರ ಲೋಕಾರ್ಪಣೆಗೊಂಡಿತು.

Advertisement

ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ಟಗ್‌ ನಿರ್ಮಾಣ
ಕೊಚ್ಚಿನ್‌ ಶಿಪ್‌ ಯಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಮಧು ಎಸ್‌. ನಾಯರ್‌ ಮಾತನಾಡಿ, ಮುಂಬರುವ ದಿನಗಳಲ್ಲಿ ಇಲ್ಲಿ ಎಲೆಕ್ಟ್ರಿಕ್‌ ಟಗ್‌ಗಳನ್ನು ನಿರ್ಮಿಸುವ ಯೋಜನೆಯಿದ್ದು ದೇಶದ ಪ್ರಮುಖ “ಟಗ್‌ ಹಬ್‌’ ಆಗಿ ಅಭಿವೃದ್ಧಿಗೊಳ್ಳಲಿದೆ ಎಂದರು.

ಪ್ರಧಾನಿಯವರ ಆತ್ಮ ನಿರ್ಭರ ಭಾರತದ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಗ್ರೀನ್‌ ಟಗ್‌ ನಿರ್ಮಾಣ ಮಾಡುವ ದೇಶದ ನಾಲ್ಕು ಪ್ರಮುಖ ಬಂದರುಗಳಲ್ಲಿ ಮಲ್ಪೆಯ ಉಡುಪಿ ಕೊಚ್ಚಿನ್‌ ಶಿಪ್‌ ಯಾರ್ಡ್‌ ಸಹ ಒಂದಾಗಲಿದೆ ಎಂದರು.

ಸ್ಥಳೀಯರಿಗೆ ಆದ್ಯತೆ
400 ಮಂದಿ ಉದ್ಯೋಗಿಗಳನ್ನು ಒಳಗೊಂಡ ಯುಸಿಎಸ್‌ಎಲ್‌ನಲ್ಲಿ ಶೇ. 60ರಷ್ಟು ಸ್ಥಳೀಯರಿದ್ದು, ಅವಕಾಶಗಳು ಹೆಚ್ಚೆಚ್ಚು ದೊರೆಯುವಂತೆ 2024ರಲ್ಲಿ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಯನ್ನು 900ಕ್ಕೆ ಹೆಚ್ಚಿಸಲಾಗುವುದು ಎಂದರು.

10 ಬೋಟುಗಳು ಪ್ರಗತಿಯಲ್ಲಿ
ಯುಸಿಎಸ್‌ಎಲ್‌ ನಿರ್ದೇಶಕ ಬಿಜೊಯ್‌ ಭಾಸ್ಕರ್‌ ಮಾತನಾಡಿ, ಈ ಹಿಂದೆ ಮಲ್ಪೆಯಲ್ಲಿದ್ದ ಟೆಬಾ¾ ಶಿಪ್‌ಯಾರ್ಡ್‌ ಅನ್ನು 2021ರಲ್ಲಿ ಯುಸಿಎಸ್‌ಎಲ್‌ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿದೆ. ಅದೇ ಆಗಸ್ಟ್‌
ನಿಂದ ಕಾರ್ಯಾರಂಭ ಮಾಡಿರುವ ಯುಸಿಎಸ್‌ಎಲ್‌, ಸೀಮಿತ ಅವಧಿಯಲ್ಲಿ 10 ಮೀನುಗಾರಿಕಾ ಬೋಟುಗಳನ್ನು ನಿರ್ಮಿಸಿದ್ದು ಇನ್ನೂ 10ಬೋಟುಗಳು ನಿರ್ಮಾಣದ ಪ್ರಗತಿಯಲ್ಲಿವೆ ಎಂದರು.

Advertisement

ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಮಾತನಾಡಿದರು. ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಚಂದ್ರಶೇಖರ್‌, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ ಕುಮಾರ್‌, ಉಡುಪಿ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಅಂಡಾರು ದೇವಿಪ್ರಸಾದ್‌ ಶೆಟ್ಟಿ, ಕರಾವಳಿ ಕಾವಲು ಪಡೆ ಎಸ್ಪಿ ಅಂಶು ಕುಮಾರ್‌, ರಿಜಿಸ್ಟ್ರಾರ್‌ ಆಫ್‌ ಶಿಪ್ಪಿಂಗ್‌ ಸಿ. ಕೆ. ಶಮ್ಮಿ, ಕೆನಡಾದ ಲಾರೆನ್‌ ಬೆಸ್ಟ್‌ ಉಪಸ್ಥಿತರಿದ್ದರು.

ಸಂಸ್ಥೆಯ ಸಿಇಒ ಹರಿಕುಮಾರ್‌ ಎ. ಸ್ವಾಗತಿಸಿದರು. ಶಂಕರ್‌ ನಟರಾಜ್‌ ವಂದಿಸಿ, ಸವಿತಾ ಕರ್ಕೇರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next