Advertisement

ಕಡಿಯಾಳಿ: ಶ್ರೀ ಮಹಿಷಮರ್ದಿನಿ ದೇಗುಲ: ಸುತ್ತುಪೌಳಿ ಲೋಕಾರ್ಪಣೆಗೊಳಿಸಿದ ಸಿಎಂ

02:05 AM Jun 02, 2022 | Team Udayavani |

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಕಲಶೋತ್ಸವ ಕಾರ್ಯ ಕ್ರಮ ಗಳು ಬುಧವಾರ ಆರಂಭ ಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಗುಲದ ಸುತ್ತುಪೌಳಿಯನ್ನು ಲೋಕಾರ್ಪಣೆ ಗೊಳಿಸಿದರು.

Advertisement

ಈ ವೇಳೆ ರಾಜ್ಯದ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಖ್ಯಮಂತ್ರಿಯವರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ದರು. ಜೀರ್ಣೋದ್ಧಾರ ಕಾರ್ಯ ವನ್ನು ವೀಕ್ಷಿಸಿ ದೇವಸ್ಥಾನ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಮುಖರಲ್ಲಿ ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಕಾಷ್ಠ ಶಿಲ್ಪದಿಂದ ಕೂಡಿದ ರಾಜ್ಯದ ಪ್ರಥಮ ಸ್ವಯಂ ಚಾಲಿತ ತಿರುಗುವ ಮುಚ್ಚಿಗೆಯನ್ನು ಅನಾವರಣ ಗೊಳಿಸಿದರು.

ಸಚಿವರಾದ ಎಸ್‌. ಅಂಗಾರ, ಆರ್‌. ಅಶೋಕ್‌, ಸುನಿಲ್‌ ಕುಮಾರ್‌, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್‌, ಸುಕುಮಾರ ಶೆಟ್ಟಿ, ಮೀನುಗಾರಿಕೆ ಫೆಡರೇಶನ್‌ ಅಧ್ಯಕ್ಷ
ಯಶ್‌ಪಾಲ್‌ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ. ಪುರುಷೋತ್ತಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ ವಿ. ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ರಾಘವೇಂದ್ರ ಕಿಣಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.
ಕಾರ್ಯದರ್ಶಿ ನಿತ್ಯಾನಂದ ಕಾಮತ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾಗರಾಜ ಶೆಟ್ಟಿ, ಸಂಧ್ಯಾ ಪ್ರಭು, ಶಶಿಕಲಾ ಭರತ್‌, ಮಂಜುನಾಥ್‌ ಹೆಬ್ಟಾರ್‌, ರಮೇಶ್‌ ಶೇರಿಗಾರ್‌, ಗಣೇಶ್‌ ನಾಯ್ಕ, ಕಾರ್ಯ ನಿರ್ವಹ ಣಾಧಿಕಾರಿ ಗಣೇಶ್‌ ರಾವ್‌, ಪ್ರಧಾನ ಅರ್ಚಕರಾದ ರಾಧಾಕೃಷ್ಣ ಉಪಾಧ್ಯ, ಶ್ರೀನಿಧಿ ಉಪಾಧ್ಯ ಉಪಸ್ಥಿತರಿದ್ದರು.

5 ಕೋ.ರೂ.ಗೆ ಬೇಡಿಕೆ
ಸುಮಾರು 8 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆ ದಿದ್ದು, ಹೆಚ್ಚುವರಿಯಾಗಿ ನೂತನ ಭೋಜನಶಾಲೆ, ಪಿಲಿಚಂಡಿ ದೈವಸ್ಥಾನ, ಯಾಗಶಾಲೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರಕಾರದಿಂದ 5 ಕೋ.ರೂ. ಅನುದಾನ ಒದಗಿಸುವಂತೆ ಮುಖ್ಯ ಮಂತ್ರಿಯವರಲ್ಲಿ ಸಮಿತಿಯಿಂದ ಬೇಡಿಕೆ ಇಡಲಾಯಿತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next