Advertisement
ಒಂದೆಡೆ ಸಂಘ-ಸಂಸ್ಥೆಗಳು, ವಾರ್ಡ್ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಸಾಧ್ಯವಾದಷ್ಟು ನೀರು ವಿತರಿಸುತ್ತಿದ್ದಾರೆ. ಶಾಲೆ, ವಾಣಿಜ್ಯ ಕಟ್ಟಡ, ಉದ್ಯಮ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ನೀರಿನ ಸಮಸ್ಯೆ ಯಿಂದಾಗಿ ನಗರದಲ್ಲಿ ಸುಮಾರು 15ರಷ್ಟು ಹೊಟೇಲ್ ಬಾಗಿಲು ಮುಚ್ಚಿವೆ. ಸಣ್ಣಪುಟ್ಟ ಹೊಟೇಲ್ಗಳಿಗೆ ದಿನ ವೊಂದಕ್ಕೆ 1 ಸಾವಿರದಿಂದ 1,500 ಲೀ.ನಷ್ಟು ನೀರು ಬೇಕಾಗುತ್ತದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ನೀರು ಲಭ್ಯವಿಲ್ಲದ ಕಾರಣ ಹೊಟೇಲ್ಗಳನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹೊಟೇಲ್ ಮಾಲಕರೊಬ್ಬರು.
Related Articles
Advertisement
ನಗರವನ್ನು 6 ವಿಭಾಗಗಳನ್ನಾಗಿ ವಿಂಗಡಿಸಿ ಆರು ದಿನಗಳಿಗೊಮ್ಮೆ ಒಂದೊಂದು ವಿಭಾಗಗಳಿಗೆ ನೀರು ಒದಗಿಸುವ ಪ್ರಕ್ರಿಯೆ ನಗರಸಭೆಯಿಂದ ನಡೆಯುತ್ತಿದೆ. ಸದ್ಯಕ್ಕೆ ಸ್ವರ್ಣಾ ನದಿಯಲ್ಲಿ 5ರಿಂದ 6 ದಿನಕ್ಕಾಗುವಷ್ಟು ಮಾತ್ರ ನೀರಿನ ಅಂದಾಜು ಲಭ್ಯತೆ ಇದೆ. ವಾರ ಕಳೆದರೂ ಮಳೆ ಬಾರದೆ ಇದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.